ಬೆಂಗಳೂರು: ಪ್ರೊ ಕಬಡ್ಡಿ ಲೀಗ್ನಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ, ಪುಣೇರಿ ಪಲ್ಟಾನ್ ತಂಡಗಳು ಜಯಭೇರಿ ಬಾರಿಸಿದೆ. ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡವು ಬೆಂಗಳೂರು ಬುಲ್ಸ್ ತಂಡವನ್ನು 38-31 ಸ್ಕೋರ್ ಅಂತರದಲ್ಲಿ ಸೋಲಿಸಿತು. ಟೂರ್ನಿಯಲ್ಲಿ
ಆಡಿದ 3 ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ಸೋಲನುಭವಿಸಿದೆ. ದಬಾಂಗ್ ಡೆಲ್ಲಿ ತಲಾ ಒಂದು ಸೋಲು, ಗೆಲುವು ದಾಖಲಿಸಿದೆ.
ಇನ್ನೊಂದು ಪಂದ್ಯದಲ್ಲಿ ಪುಣೇರಿ ಪಲ್ಟಾನ್ ಯು ಮುಂಬಾ ತಂಡವನ್ನು 43-32 ಸ್ಕೋರ್ ಅಂತರದಲ್ಲಿ ಪರಾಭವಗೊಳಿಸಿತು. ಪುಣೇರಿ ಆಡಿದ ಎರಡೂ ಪಂದ್ಯದಲ್ಲಿ ಜಯ ಗಳಿಸಿದರೆ, ಯು ಮುಂಬಾ 3 ಪಂದ್ಯದಲ್ಲಿ ಒಂದು ಜಯ, 2 ಸೋಲು ದಾಖಲಿಸಿದೆ.









