ಬೆಂಗಳೂರು:ಚಂದ್ರಯಾನ್ 3 ರ ಪ್ರಗ್ಯಾನ್ ರೋವರ್ ವಿಕ್ರಮ್ ಲ್ಯಾಂಡರ್ನಿಂದ ಹೊರಬಂದು ಚಂದ್ರನ ಮೇಲ್ಮೈ ಮೇಲೆ ಹೆಜ್ಜೆಯಿಟ್ಟು ಚಲನೆ ಆರಂಭಿಸಿದೆ. ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಬುಧವಾರ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ಇದೀಗ ಮುಂದಿನ ಹಂತ
ಆರಂಭವಾಗಿದ್ದು ಪ್ರಗ್ಯಾನ್ ರೋವರ್ ವಿಕ್ರಮ್ ಲ್ಯಾಂಡರ್ನಿಂದ ಹೊರಬಂದಿದ್ದು, ಚಂದ್ರನ ಮೇಲ್ಮೈ ಮೇಲೆ ಚಲನೆ ಆರಂಭಿಸಿದೆ ಎಂದು ಗುರುವಾರ ಇಸ್ರೊ ಟ್ವೀಟ್ ಮಾಡಿದೆ.
ಚಂದ್ರಯಾನ-3 ಚಂದ್ರನ ಮೇಲೆ ತನ್ನ ಐತಿಹಾಸಿಕ ಲ್ಯಾಂಡಿಂಗ್ ಮಾಡಿದ ಕೆಲವೇ ಗಂಟೆಗಳ ನಂತರ ಯಶಸ್ವಿ ಮುಂದಿನ ಹಂತವನ್ನು ಆರಂಭಿಸಿದೆ. ಲ್ಯಾಂಡಿಂಗ್ ಆಗಿ ಕೆಲವು ಗಂಟೆಗಳ ಬಳಿಕ ರೋವರ್ ಲ್ಯಾಂಡರ್ನಿಂದ ಹೊರ ಬಂದಿದೆ. ಒಂದು ಲುನಾರ್ ದಿನ ಅಂದರೆ 14 ದಿನಗಳು ಚಂದ್ರನ ಮೇಲೆ ಕಾರ್ಯಾಚರಿಸಲಿದೆ.