ಸುಳ್ಯ: ಸುಮಾರು ಒಂದು ತಿಂಗಳ ಕಾಲ ನಡೆದ ಭರ್ಜರಿ ಚುನಾವಣಾ ಪ್ರಚಾರಕ್ಕೆ ಮೇ.8 ರಂದು ಸಂಜೆ ತೆರೆ ಬೀಳಲಿದೆ. ಮೇ.10 ರಂದು ನಡೆಯುವ ಚುನಾವಣಾ ಪ್ರಚಾರಕ್ಕೆ ತೆರೆ ಬೀಳುವುದರ ಅಂಗವಾಗಿ ವಿವಿಧ ರಾಜಕೀಯ ಪಕ್ಷಗಳು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್
ರೋಡ್ ಶೋ ಹಮ್ಮಿಕೊಂಡಿದೆ. ಬಿಜೆಪಿ ವತಿಯಿಂದ ಸಂಜೆ ಕಡಬದಲ್ಲಿ ಬೃಹತ್ ರೋಡ್ ಶೋ ಹಮ್ಮಿಕೊಂಡಿದೆ. ಅಭ್ಯರ್ಥಿ ಭಾಗೀರಥಿ ಮುರುಳ್ಯ ಭಾಗವಹಿಸಲಿದ್ದಾರೆ. ಗುತ್ತಿಗಾರಿನಲ್ಲಿಯೂ ಬಿಜೆಪಿ ರೋಡ್ ಶೋ ಹಮ್ಮಿಕೊಂಡಿದೆ.
ಕಾಂಗ್ರೆಸ್ ವತಿಯಿಂದ ಸುಳ್ಯ ನಗರದಲ್ಲಿ ಅಪರಾಹ್ನ 3 ಗಂಟೆಗೆ ಬೃಹತ್ ರೋಡ್ ಶೋ ಹಮ್ಮಿಕೊಂಡಿದೆ. ಅಭ್ಯರ್ಥಿ ಜಿ.ಕೃಷ್ಣಪ್ಪ ಮತ್ತು ನಾಯಕರು ಭಾಗವಹಿಸಲಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ ಅವರು ಪೂ.9 ಗಂಟೆಯಿಂದ ಪೈಚಾರ್ನಿಂದ ಪ್ರಾರಂಭಗೊಂಡು ಗಾಂಧಿನಗರದವರೆಗೆ ರೋಡ್ ಶೋ ಮೂಲಕ ಮತ ಯಾಚನೆ ನಡೆಸಲಿದ್ದಾರೆ.
ಆಮ್ ಆದ್ಮಿ ಪಾರ್ಟಿ ವತಿಯಿಂದ ಕ್ಷೇತ್ರದಾದ್ಯಂತ ರೋಡ್ ಶೋ ಮೂಲಕ ಪ್ರಚಾರ ನಡೆಯಲಿದೆ. ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಹಾಗು ಮುಖಂಡರು ಭಾಗವಹಿಸಲಿದ್ದಾರೆ. ಅಪ್ ರೋಡ್ ಶೋ ಸಂಪಾಜೆ, ಕಲ್ಲುಗುಂಡಿ, ಅರಂತೋಡು, ಸುಳ್ಯ, ಪೈಚಾರು, ಸೋಣಂಗೇರಿ, ಗುತ್ತಿಗಾರು, ಸುಬ್ರಹ್ಮಣ್ಯ, ಕಡಬ, ಅಲಂಕಾರು, ಕಡಬ, ಪಂಜ, ನಿಂತಿಕಲ್ಲು, ಕಾಣಿಯೂರು, ಬೆಳಂದೂರು, ಸವಣೂರು, ಪೆರುವಾಜೆ, ಬೆಳ್ಳಾರೆ, ಐವರ್ನಾಡು, ಸೋಣಂಗೇರಿ ಮೂಲಕ ಸುಳ್ಯಕ್ಕೆ ರೋಡ್ ಶೋ ಆಗಮಿಸಲಿದೆ.