ಬೆಂಗಳೂರು: ಮನೆಯುಂದಲೇ ಮತದಾನ ಮಾಡುವ ಪ್ರಕ್ರಿಯೆ ಶನಿವಾರ ಸಂಜೆಗೆ ಮುಕ್ತಾಯಗೊಂಡಿದ್ದು, ನೋಂದಾಯಿಸಿಕೊಂಡಿದ್ದ 99,529 ಮಂದಿ ಪೈಕಿ 94,326 (ಶೇಕಡ 94.77) ಜನರು ಮನೆಗಳಿಂದಲೇ ಹಕ್ಕು ಚಲಾಯಿಸಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾಗಿರುವವರು ಹಾಗೂ ಅಂಗವಿಕಲರಿಗೆ ಮನೆಯಿಂದ
ಮತದಾನ ಮಾಡಲು ಈ ಚುನಾವಣೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಏಪ್ರಿಲ್ 29ರಂದು ಆರಂಭವಾಗಿದ್ದ ಮನೆ ಮತದಾನ ಪ್ರಕ್ರಿಯೆ ಶನಿವಾರ ಸಂಜೆಯವರೆಗೂ ನಡೆಯಿತು.
80,250 ಹಿರಿಯ ನಾಗರಿಕರು ಮನೆಯಿಂದ ಮತದಾನಕ್ಕೆ ನೋಂದಣಿ ಮಾಡಿಸಿಕೊಂಡಿದ್ದರು. ಅವರಲ್ಲಿ 75,690 ಜನರು (ಶೇ 94.32) ಹಕ್ಕು ಚಲಾಯಿಸಿದ್ದಾರೆ. 19,279 ಅಂಗವಿಕಲರು ನೋಂದಾಯಿಸಿಕೊಂಡಿದ್ದು, ಅವರಲ್ಲಿ 18,636 ಜನರು (ಶೇ 96.66) ಮತ ಚಲಾಯಿಸಿದ್ದಾರೆ ಎಂದು ಮೀನಾ ಮಾಹಿತಿ ನೀಡಿದ್ದಾರೆ.
ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 1705 ಮಂದಿ ಮನೆಯಿಂದ ಮತ ಚಲಾವಣೆ ಮಾಡಿದ್ದಾರೆ. 80 ವರ್ಷ ಮೇಲ್ಪಟ್ಟವರು 1385 ಮಂದಿ ಹಾಗೂ ಅಂಗವಿಕಲರು 396 ಮಂದಿ ಸೇರಿ 1781 ಮಂದಿಯಲ್ಲಿ 80 ವರ್ಷ ಮೇಲ್ಪಟ್ಟವರು 1324 ಮಂದಿ ಹಾಗು 381 ಅಂಗವಿಕಲರು ಸೇರಿ ಒಟ್ಟು 1705 ಮಂದಿ ಮತ ಚಲಾಯಿಸಿದ್ದಾರೆ.