ಸುಳ್ಯ: ಸುಳ್ಯದಲ್ಲಿ ಇಂದು ಸಂಜೆ ಭರ್ಜರಿ ಮಳೆ ಸುರಿದಿದೆ. ಮಳೆ ಸುರಿದ ಬೆನ್ನಲ್ಲೇ ಸುಳ್ಯದಲ್ಲಿ ಕತ್ತಲು ಆವರಿಸಿದೆ. ಸಂಜೆ ಮಳೆ ಆರಂಭವಾಗುತ್ತಿದ್ಸಂತೆ ಕಡಿತಗೊಂಡ ವಿದ್ಯುತ್ ರಾತ್ರಿಯಾದರೂ ಬಂದಿಲ್ಲ.
ರಾತ್ರಿ 8.30 ಆದರೂ ವಿದ್ಯುತ್ ಸಂಪರ್ಕ ಮರು ಸ್ಥಾಪನೆಯಾಗಿಲ್ಲ. ಕನಕಮಜಲು ಭಾಗದಲ್ಲಿ ಮಳೆ, ಗಾಳಿಗೆ ಮರ ಬಿದ್ದು ವಿದ್ಯುತ್
ಕಡಿತಗೊಂಡಿದೆ.ಮರ ತೆರವು ಕಾರ್ಯ ನಡೆಯುತ್ತಿದ್ದು ವಿದ್ಯುತ್ ಸಂಪರ್ಕ ಸರಿಪಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ.
ಕತ್ತಲು ಆವರಿಸಿದ ಸುಳ್ಯ.!
ವಿದ್ಯುತ್ ಸಂಪರ್ಕ ಕಡಿತಗೊಂಡ ಕಾರಣ ಸುಳ್ಯ ನಗರ ಸಂಪೂರ್ಣ ಕತ್ತಲು ಆವರಿಸಿದೆ. ನಗರದಲ್ಲಿ ವಾಹನಗಳ ಬೆಳಕು ಮಾತ್ರ ಕಂಡು ಬರುತಿದೆ. ಹಲವು ಅಂಗಡಿಗಳು ವಿದ್ಯುತ್ ಇಲ್ಲದ ಕಾರಣ ಬೇಗನೇ ಬಂದ್ ಮಾಡಲಾಗಿದೆ. ಕೆಲವು ಅಂಗಡಿಗಲ್ಲಿ ಇನ್ವೆರ್ಟರ್ ಇಲ್ಲದ ಕಾರಣ ಮೇಣದ ಬತ್ತಿಯಲ್ಲಿ ವ್ಯವಹಾರ ನಡೆಸುತ್ತಾ ಇದ್ದದು ಕಂಡು ಬಂದಿದೆ.
ಉತ್ತಮ ಮಳೆ ಬಂದರೆ ಸುಳ್ಯ ನಗರ ಸೇರಿ ತಾಲೂಕಿನಾದ್ಯಂತ ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ಕಳೆದ ಹಲವು ದಶಕಗಳಿಂದ ಜನರು ಈ ಬವಣೆ ಅನುಭವಿಸುತ್ತಾ ಇದ್ದಾರೆ 110 ಕೆವಿ ಸಬ್ ಸ್ಟೇಷನ್ ಅನುಷ್ಠಾನ ಮಾಡುವುದು ಇದಕ್ಕೆ ಪರಿಹಾರ ಎಂದು ಸಾರ್ವಜನಿಕರು ಹೇಳುತ್ತಾರೆ.