ಪೆರುವಾಜೆ: ಪೆರುವಾಜೆ ಡಾ. ಕೆ .ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ವ್ಯಕ್ತಿ ಕೋಶದ ವತಿಯಿಂದ “ಕೆಸೆಟ್ ಮತ್ತು ನೆಟ್ ಪರೀಕ್ಷಾ ತಯಾರಿ ” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು
ಹಮ್ಮಿಕೊಳ್ಳಲಾಗಿತ್ತು. ಚಿಕ್ಕಮಗಳೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ
ದೀಕ್ಷಿತ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದಾಮೋದರ ಕಣಜಾಲು ವಹಿಸಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ವಿನುತಾ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಕಾಂ ವಿದ್ಯಾರ್ಥಿಗಳಾದ ಶೃತಿ ಸ್ವಾಗತಿಸಿ, ಚೈತ್ರ ವಂದಿಸಿದರು. ಪ್ರಜ್ಞಾ ಸಿ.ಎಂ ಕಾರ್ಯಕ್ರಮ ನಿರೂಪಿಸಿದರು .









