ಪೆರಾಜೆ: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ
ನಡೆಯುತ್ತಿದ್ದು ಏ.6 ರಂದು ರಾತ್ರಿ ಶ್ರೀ ಕರಿಭೂತ ಕೋಮಾಳಿ ದೈವಗಳ ಹರಿಕೆ ಕೋಲಗಳು ನಡೆಯಿತು. ಎ.5ರಂದು ರಾತ್ರಿ ಶ್ರೀ ಕರಿಭೂತ ಕೋಮಾಳಿ ಮಾಮೂಲು ಕೋಲಗಳು ನಡೆದವು. ಜಾತ್ರೆಯ ಭಾಗವಾಗಿ ವಿವಿಧ ದಿನಗಳಲ್ಲಿ
ಕಿರಿಯರ ನೇಮ ಮತ್ತು ರುದ್ರ ಚಾಮುಂಡಿ, ಶ್ರೀ ಕಲ್ಕುಡ ಮತ್ತು ಪಾಷಾಣಮೂರ್ತಿ ದೈವಗಳ ಕೋಲ ಹಾಗೂ ಶ್ರೀ ಕೊರಗ ತನಿಯ ದೈವದ ಕೋಲಗಳು ನಡೆಯಿತು.
ಇಂದು( ಎ.7) ರಾತ್ರಿ 7ರಿಂದ ಗುಳಿಗನ ಕೋಲ ನಡೆಯಲಿದೆ. ಎ.9ರಂದು ರಾತ್ರಿ 8 ರಿಂದ ಒತ್ತೆಕೋಲಕ್ಕೆ ಕೂಡುವುದು, ಭಂಡಾರ ತೆಗೆಯುವುದು ಮೇಲೇರಿ ಕುಳ್ಚಾಟ. ಎ.10ರಂದು ಬೆಳಿಗ್ಗೆ 5-30ರಿಂದ ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲ ಮತ್ತು ರುದ್ರ ಚಾಮುಂಡಿ ಕೋಲ ಹಾಗೂ ಪ್ರಸಾದ ವಿತರಣೆ ಮಾರಿಕಳ ನಡೆಯುವುದರೊಂದಿಗೆ

ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.
ಜಾತ್ರೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಭ್ರಮ ಏರ್ಪಡಿಸಲಾಗಿತ್ತು. ಶ್ರೀ ಶಾಸ್ತಾವು ಯಕ್ಷಗಾನ ಕಲಾ ಸಂಘ ಪೆರಾಜೆ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ‘ರತ್ನಾವತಿ ಕಲ್ಯಾಣ’ ನಡೆಯಿತು.
ಎ.9ರಂದು ರಾತ್ರಿ ಗಂಟೆ 8ರಿಂದ ಸಾರ್ವಜನಿಕ ಪುರುಷರ ಗ್ರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಲಿದೆ.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು,ಸಹ ಕಾರ್ಯದರ್ಶಿ, ಚಿನ್ನಪ್ಪ ಅಡ್ಕ,ದೇವತಕ್ಕರಾದ ರಾಜಗೋಪಾಲ ರಾಮಕಜೆ ತಕ್ಕ ಮುಖ್ಯಸ್ಥರಾದ ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ವಾಸುದೇವ ಕೋಡಿ, ಕುಶಾಲಪ್ಪ ಕುಂಬಳಚೇರಿ, ಪುರುಷೋತ್ತಮ ನಿಡ್ಯಮಲೆ.ಆಡಳಿತ ಸಮಿತಿ ಸದಸ್ಯರುಗಳು, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಮುಖಂಡರು, ಅರ್ಚಕ ವೃಂದ ಮತ್ತು ಸಿಬ್ಬಂದಿವರ್ಗ ಹಾಗೂ ಊರ ಪರವೂರ ಭಗವದ್ಭಕ್ತರು ಇದ್ದರು.










