ಪೆರಾಜೆ:ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಮಾ.25ರಿಂದ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದ್ದು ಎ.10ರ ತನಕ ನಡೆಯಲಿದೆ. ಮಾ.30ರಂದು ಹಗಲು ಕರಿಂತಿರಿ ನಾಯರ್ ದೈವ, ಪುಲಿಮಾರುತನ್ ದೈವ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವಗಳು ನೆರೆದ ಭಕ್ತರನ್ನು ಹರಸಿತು. ರಾತ್ರಿ 8ರಿಂದ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳ ಬೆಳ್ಳಾಟಗಳು ನಂತರ
ತುಳು ಕೋಲಗಳ ಬೆಳ್ಳಾಟ 2 ,ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲಗಳ ತಿರುವಪ್ಪಗಳು ನಡೆಯಿತು.
ಇಂದು(ಮಾ.31ರಂದು) ಹಗಲು ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳು, ಬೇಟೆ ಕರಿಮಗನ್ ಈಶ್ವರನ್ ದೈವ ರಾತ್ರಿ ಗಂಟೆ 7-30ರಿಂದ ಭಗವತಿ ದೇವಿ ಸಮಾರಾಧನೆ ರಾತ್ರಿ 8 ರಿಂದ ಪುಲ್ಲೂರ್ ಕಣ್ಣನ್ ಬೆಳ್ಳಾಟ 1, ತುಳು ಕೋಲಗಳು ಬೆಳ್ಳಾಟ 1 ಮಲೆಕಾರಿ ಬೆಳ್ಳಾಟ 1, ವಿಷ್ಣುಮೂರ್ತಿ ತೊಡಙಲ್, ರಕೇಶ್ವರಿ ತೊಡಂಙಲ್, ಪೊಟ್ಟನ್ ದೈವದ ತೊಡಂಙಲ್ ಬೇಟೆ ಕರಿಮಗನ್ ಬೆಳ್ಳಾಟ, ಭಗವತಿ ಕಲಶ ಬರುವುದು ಮತ್ತು ಭಗವತಿ ತೋಟ್ಟಂ, ಆಯರ್ ಭಗವತಿ ತೋಟ್ಟಂ, ಪುಲ್ಲೂರುಕಾಳಿ ತೋಟ್ಟಂ,
ತುಳುಕೋಲ ಮತ್ತು ಮಲೆಕ್ಕಾರಿ ತಿರುವಪ್ಪಗಳು ನಡೆಯಲಿದೆ.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು,ಸಹ ಕಾರ್ಯದರ್ಶಿ, ಚಿನ್ನಪ್ಪ ಅಡ್ಕ,ದೇವತಕ್ಕರಾದ ರಾಜಗೋಪಾಲ ರಾಮಕಜೆ ತಕ್ಕ ಮುಖ್ಯಸ್ಥರಾದ
ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ,ಪುರುಷೋತ್ತಮ ನಿಡ್ಯಮಲೆ.
ಆಡಳಿತ ಸಮಿತಿ ಸದಸ್ಯರುಗಳು, ಅರ್ಚಕ ವೃಂದ ಮತ್ತು ಸಿಬ್ಬಂದಿವರ್ಗ ಹಾಗೂ ಊರ ಭಗವದ್ಭಕ್ತರು ಇದ್ದರು.