ಗುವಾಹಟಿ: ಪಂಜಾಬ್ ಕಿಂಗ್ಸ್ ತಂಡವು ಬುಧವಾರ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಐದು ವಿಕೆಟ್ಗಳಿಂದ ಜಯ ಸಾಧಿಸಿತು.ರಾಯಲ್ಸ್ ತಂಡವು ಈ ಸೋಲಿನೊಂದಿಗೆ ಲೀಗ್ ಹಂತದ ಅಭಿಯಾನವನ್ನು ಮುಗಿಸಿತು. ಇದು ರಾಜಸ್ಥಾನ ತಂಡಕ್ಕೆ ಸತತ ನಾಲ್ಕನೇ ಸೋಲಾಗಿದೆ. ತಂಡವು 16 ಅಂಕಗಳೊಂದಿಗೆ ಈಗಾಗಲೇ ಪ್ಲೇಆಫ್ಗೆ
ಮುನ್ನಡೆದಿದೆ.ಪಂಜಾನ್ ತಂಡವು ಈ ಗೆಲುವಿನೊಂದಿಗೆ 10 ಅಂಕವನ್ನು ಕಲೆಹಾಕಿ, ಪಾಯಿಂಟ್ ಪಟ್ಟಿಯಲ್ಲಿ 10ನೇ ಸ್ಥಾನದಿಂದ 9ನೇ ಸ್ಥಾನಕ್ಕೇರಿದೆ. ಪ್ಲೇಆಫ್ ರೇಸ್ನಿಂದ ಹೊರಬಿದ್ದಿರುವ ಕಿಂಗ್ಸ್, ಭಾನುವಾರ ಔಪಚಾರಿಕ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡವನ್ನು 9 ವಿಕೆಟ್ಗೆ 144 ರನ್ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು.ಗುರಿಯನ್ನು ಬೆನ್ನತ್ತಿದ ಕಿಂಗ್ಸ್ ನಾಯಕ ಸ್ಯಾಮ್ ಕರನ್ (ಔಟಾಗದೇ 63; 41ಎ, 2 ವಿಕೆಟ್) ಅವರ ಆಲ್ರೌಂಡ್ ಆಟದ ನೆರವಿನಿಂದ ಗೆಲುವು ಸಾಧಿಸಿತು.
ಜಿತೇಶ್ ಶರ್ಮಾ (22) ಆಶುತೋಷ್ ಶರ್ಮಾ (ಔಟಾಗದೇ 17) ಕೊಡುಗೆ ನೀಡಿದರು.ರಾಜಸ್ಥಾನ ಪರ ರಿಯಾನ್ ಪರಾಗ್ ಅವರು ತಂಡದ ಪರ ಅತ್ಯಧಿಕ 48 ರನ್ (34 ಎಸೆತ) ಗಳಿಸಿ ಗಮನ ಸೆಳೆದರು. ಆರ್.ಅಶ್ವಿನ್ (28, 19ಎ, 4×3, 6×1) ರನ್ ಬಾರಿಸಿದರು.