ಪೆರಾಜೆ:ಕಾಡಿನ ಮಧ್ಯೆ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಪಾಠ. ಪೆರಾಜೆ ಜ್ಯೋತಿ ಪ್ರೌಢ ಶಾಲೆಯ ಮಕ್ಕಳಿಗೆ ಪೂಮಲೆ ಕಾಡಿನ ಕೆಳ ಭಾಗದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು. ಅರಣ್ಯದ ಮಹತ್ವ ಮತ್ತು ಪ್ರಯೋಜನಗಳ ಕುರಿತು
ಸುಳ್ಯ ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್ ಮಕ್ಕಳಿಗೆ ಮಾಹಿತಿ ನೀಡಿದರು. ಪೂಮಲೆ ಕಾಡಿನ ಹಿನ್ನಲೆ ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ಗೋಪಾಲ ಪೆರಾಜೆ ಮಾಹಿತಿ ನೀಡಿದರು. ಸುಳ್ಯ ವಲಯದ ಆಲೆಟ್ಟಿ ಅರಣ್ಯ ಸಿಬ್ಬಂದಿಗಳಾದ ಬಾಲಕೃಷ್ಣ. ಡಿ, ವಾರಿಜಾ ಎನ್.ಡಿ, ಶಾಲಾ ಶಿಕ್ಷಕರಾದ ಬೇಬಿ ರಕ್ಷಾ, ವಿತುಲಾ, ಜ್ಯೋತಿ ಪ್ರೌಢ ಶಾಲೆಯ ನಿರ್ದೇಶಕರಾದ ಅಶೋಕ ಪೀಚೆಮನೆ ವಿದ್ಯಾರ್ಥಿಗಳ ಜೊತೆಯಲ್ಲಿದ್ದರು. ಬಳಿಕ ಕಲ್ಚರ್ಪೆಯಲ್ಲಿ ನಗರ ಪಂಚಾಯತ್ ಬರ್ನಿಂಗ್ ಮೆಷಿನ್ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು.