ಪಂಜ:ಸೀಮೆ ದೇವಸ್ಥಾನ ಪಂಜ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ ಸಂಪನ್ನಗೊಂಡಿತು. ಫೆ.15ರಂದು. ರಾತ್ರಿ 8ರಿಂದ 9-45ರ ತನಕ ಶ್ರೀ ದೇವರಿಗೆ ಏಕಾದಶರುದ್ರಾಭಿಷೇಕ, ಬಿಲ್ವಾರ್ಚನೆ, ರುದ್ರ ಪಾರಾಯಣ ನಡೆದು ರಾತ್ರಿ 10ಗಂಟೆಗೆ ಮಹಾಪೂಜೆ ನಡೆಯಿತು. ಮಧ್ಯಾಹ್ನ
ಸರ್ವಸೇವೆ, ಶಿವಪೂಜೆ, ಮಹಾಪೂಜೆ, ಬಿಲ್ವಾರ್ಚನೆ ರುದ್ರಾಭಿಷೇಕ. ರಾತ್ರಿ ಶಿವಪೂಜೆ, ಮಹಾಪೂಜೆ, ಬಿಲ್ವಾರ್ಚನೆ, ರುದ್ರಾಭಿಷೇಕ ನಡೆಯಿತು.ಪೂರ್ವಾಹ್ನ 8ರಿಂದ ರಾತ್ರಿ 8ರ ತನಕ ಭಜನಾ ಸಂಕೀರ್ತನೆ ನಡೆಯಿತು. ವಿವಿಧ ಭಜನಾ ಮಂಡಳಿಗಳು ಭಜನಾ ಸಂಕೀರ್ತನೆ ಪ್ರಸ್ತುತಪಡಿಸಿದರು.
ಪಾದಯಾತ್ರೆ:
ಶಿವರಾತ್ರಿ ದಿನ ಶ್ರೀ ಕಪಿಲೇಶ್ವರ ದೇವಸ್ಥಾನ ಚಾರ್ವಾಕ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ಧರ್ಮಪಾಲ ಕರಂದ್ಲಾಜೆ ಹಾಗೂ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ ಗೌಡ ಇಡ್ಯಡ್ಕ ಇವರ ನೇತೃತ್ವದಲ್ಲಿ ಭಕ್ತಾದಿಗಳು

ಪಾದಯಾತ್ರೆಯ ಮೂಲಕ ಸೀಮೆ ದೇವಸ್ಥಾನ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದರು.ಚಾರ್ವಾಕ, ಎಡಮಂಗಲ, ಪುಳಿಕುಕ್ಕು ಮಾರ್ಗವಾಗಿ ನೂರಾರು ಭಕ್ತರು ಪಂಜ ಸೀಮೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲಕ್ಕೆ ಆಗಮಿಸಿದರು. ಪಾದಯಾತ್ರೆಯ ಭಕ್ತಾದಿಗಳನ್ನು ಪೂರ್ವಾಹ್ನ 11 ಗಂಟೆಗೆ ಪಂಜ ಪೇಟೆಯ ದ್ವಾರದ ಬಳಿಯಲ್ಲಿ ಪಂಜ ಶ್ರೀ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ನೇತೃತ್ವದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತರು ಸ್ವಾಗತಿಸಿ ಶ್ರೀ ದೇಗುಲಕ್ಕೆ ಪಾದಯಾತ್ರೆಯಲ್ಲಿ ಕರೆ ತಂದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ಪೈಂದೋಡಿ ಶ್ರೀ ಸುಬ್ರಾಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದನಿರ್ದೇಶಕ ಲಿಗೋಧರ ಆಚಾರ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಸದಸ್ಯ ಲಕ್ಷ್ಮಣ ಗೌಡ ಬೊಳ್ಳಾಜೆ, ವ್ಯವಸ್ಥಾಪನಾ ಸಮಿತಿಯ ಗೌರವ ಸಲಹೆಗಾರ ಪರಮೇಶ್ವರ ಬಿಳಿಮಲೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂತೋಷ ರೈ ಪಲ್ಲತ್ತಡ್ಕ ಬಳ್ಪ, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಮರಕ್ಕಡ, ಮಾಯಿಲಪ್ಪ ಗೌಡ ಪಟ್ಟೆ ಎಣ್ಮೂರು ಮಾಲಿನಿ ಕುದ್ವ, ಪವಿತ್ರ ಮಲ್ಲೆಟಿ, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.




