ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಆರನೇ ದಿನ ಭಕ್ತಿ ಸಂಭ್ರಮದ ನವರಾತ್ರಿ ಪೂಜೆ ನಡೆಯಿತು. ಪಂಜ ವನಿತಾ ಸಮಾಜ ಅವರಿಂದ ಭಜನಾ ಸಂಕೀರ್ತನೆ, ಶ್ರೀ ಶಾರದಾಂಬಾ ಮಕ್ಕಳ ಕುಣಿತ ಭಜನಾ ತಂಡ ನಾಗತೀರ್ಥ ಇವರಿಂದ
ಕುಣಿತ ಭಜನೆ ನಡೆಯಿತು. ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಗೌರವ ಸಲಹೆಗಾರರು,ಭಕ್ತಾದಿಗಳು ಪಾಲ್ಗೊಂಡಿದ್ದರು.ಅ.17 ರಂದು

ಶಿವಳ್ಳಿ ಸಂಪದ ಪಂಜ ವಲಯ ಅವರಿಂದ ಭಜನಾ ಸಂಕೀರ್ತನೆ. ಮಾಸ್ಟರ್ ತನ್ಮಯ್ ಕಿನ್ನಿಕುಮ್ರಿ (ಕರ್ನಾಟಕ ಕಲಾಶ್ರೀ ವಿದುಷಿ ನಯನ,ವಿ ರೈ ಹಾಗೂ ವಿದುಷಿ ಸ್ವಸ್ತಿಕ ಆರ್ ಶೆಟ್ಟಿ ಇವರ ಶಿಷ್ಯ)
ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.











