ಪಂಜ:ಭದ್ರ-ಟೆಕ್ ವಿಂಡೋಸ್ & ಡೋರ್ಸ್ ನಿಂತಿಕಲ್ಲು ಇದರ ಸಹ ಸಂಸ್ಥೆಯು ಪಂಜದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉತ್ಕರ್ಷ ಸೌಧದಲ್ಲಿ ಶುಭಾರಂಭಗೊಂಡಿತು.ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ದೀಪ ಬೆಳಗಿಸಿ, ಉದ್ಘಾಟಿಸಿದರು.ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಶುಭ ಹಾರೈಸಿದರು.ಸಂಸ್ಥೆಯ
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಸದಸ್ಯರಾದ ಚಂದ್ರಶೇಖರ ದೇರಾಜೆ, ಲಿಖಿತ್ ಪಲ್ಲೋಡಿ, ಕಿರಣ್ ಕಂರ್ಬು ನೆಕ್ಕಿಲ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು, ಲೋಕೇಶ್ ಬರೆಮೇಲು,ನ್ಯಾಯವಾದಿ ಶಂಕರ್ ಭಟ್, ಕರ್ನಾಟಕ ಯುವಕ ಮಂಡಲದ ಕಾರ್ಯಧರ್ಶಿ ಅಶೋಕ್ ಕೋಡಿ, ಹರೀಶ್ ಕರಿಮಜಲು, ದಾಸಪ್ಪ ಗೌಡ ಮೇಲ್ಮನೆ, ಶ್ರೀಮತಿ ಭುವನೇಶ್ವರಿ ದಯಾನಂದ ಮೇಲ್ಮನೆ, ವಿದ್ಯಾನಂದ ಮೇಲ್ಮನೆ, ಸಂಸ್ಥೆಯ ಸಿಬ್ಬಂದಿಗಳು, ಮೊದಲಾದವರು ಉಪಸ್ಥಿತರಿದ್ದರು.ನಿತ್ಯಾನಂದ ಮೇಲ್ಮನೆ ಸ್ವಾಗತಿಸಿ, ದಯಾನಂದ ಮೇಲ್ಮನೆ ವಂದಿಸಿದರು.













