ಕಲ್ಲಪಳ್ಳಿ: ಪಂಚಾಯತ್ ಚುನಾವಣೆಯಲ್ಲಿ ಗಡಿ ಪ್ರದೇಶವಾದ ಪನತ್ತಡಿ ಪಂಚಾಯತ್ನ ಏಳನೇ ವಾರ್ಡ್ ಕಲ್ಲಪಳ್ಳಿಯಲ್ಲಿ ಶೇ.91.18 ಮತದಾನ ದಾಖಲಾಗಿದೆ. 1146 ಮತದಾರರ ಪೈಕಿ 1045 ಮಂದಿ ಮತ ಚಲಾಯಿಸಿದ್ದಾರೆ.ಬೆಳಿಗ್ಗಿನಿಂದ
ಬಿರುಸಿನ ಮತದಾನ ಕಂಡು ಬಂದಿದ್ದು ಸಂಜೆಯ ತನಕ ಉದ್ದನೆಯ ಸರತಿ ಸಾಲು ಕಂಡು ಬಂದಿತ್ತು.
ಕಲ್ಲಪ್ಪಳ್ಳಿಯಲ್ಲಿ ಸಿಪಿಐಎಂ ನೇತೃತ್ವದ ಎಲ್ಡಿಎಫ್ ಅಭ್ಯರ್ಥಿಯಾಗಿ ನಳಿನಾಕ್ಷಿ, ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿಯಾಗಿ ಭವ್ಯ ಜಯರಾಜ್ ಹಾಗು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿಯಾಗಿ ಸಿಂಧು ಜಾರ್ಜ್ ಸ್ಪರ್ಧಿಸಿದ್ದರು.ಡಿ.13ರಂದು ಮತ ಎಣಿಕೆ ನಡೆಯಲಿದೆ. ಮೂರು ಪಕ್ಷದ ಅಭ್ಯರ್ಥಿಗಳು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಸರಗೋಡು ಸೇರಿ ಏಳು ಜಿಲ್ಲೆಗಳಲ್ಲಿ ಡಿ.11ರಂದು ಗ್ರಾಮ ಪಂಚಾಯತ್, ಬ್ಲಾಕ್ ಪಂಚಾಯತ್, ಜಿಲ್ಲಾ ಪಂಚಾಯತ್, ನಗರ ಸಭೆ, ಕಾರ್ಪೋರೇಷನ್ ಚುನಾವಣೆ ನಡೆಯಿತು.













