ಪಾಣತ್ತೂರು:ಗಡಿ ಗ್ರಾಮವಾದ ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪಿ.ರಘುನಾಥ್ ಹಾಗೂ ಉಪಾಧ್ಯಕ್ಷರಾಗಿ ಪದ್ಮಕುಮಾರಿ ಆಯ್ಕೆ ನಡೆಯಿತು.ಡಿ.27 ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಎಲ್ಡಿಎಫ್ ಸದಸ್ಯರಾದ ರಘುನಾಥ್ ಹಾಗೂ
ಪದ್ಮಕುಮಾರಿ ಇವರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು. ಪನತ್ತಡಿ ಪಂಚಾಯತ್ನಲ್ಲಿ 17 ಸ್ಥಾನಗಳಲ್ಲಿ ಸಿಪಿಎಂ ನೇತೃತ್ವದ ಎಲ್ಡಿಎಫ್ 8, ಕಾಂಗ್ರೆಸ್ ನೇತೃತ್ವದ ಯುಡಿಎಫ್ 6 ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ 3 ಸ್ಥಾನಗಳಿಗಳನ್ನು ಗೆದ್ದು ಕೊಂಡಿತು. ಸರಳ ಬಹುಮತ ಯಾರಿಗೂ ದೊರಕಲಿಲ್ಲ.ಚುನಾವಣೆಯಲ್ಲಿ ಅತೀ ಹೆಚ್ಚು ಮತ ಪಡೆದ ಎಲ್ಡಿಎಫ್ ಅಧಿಕಾರಕ್ಕೇರಿತು.

















