ದುಬೈ: ಪಾಕಿಸ್ತಾನ ತಂಡ ಏಷ್ಯಾ ಕಪ್ ಟಿ20 ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಅನನುಭವಿ ಒಮಾನ್ ವಿರುದ್ಧ 93 ರನ್ಗಳ ನಿರಾಯಾಸದ ಗೆಲುವು ಸಾಧಿಸಿತು.ಪಾಕಿಸ್ತಾನ ನೀಡಿದ್ದ 161 ರನ್ಗಳ ಗುರಿಯನ್ನು ಬೆನ್ನಟ್ಟಿದ ಒಮಾನ್ ತಂಡವು 16.4 ಓವರ್ಗಳಲ್ಲಿ 67 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಒಮಾನ್ ತಂಡದ
ಹಮದ್ ಮಿರ್ಜಾ (27) ಹೊರತುಪಡಿಸಿ ಉಳಿದವರು ಬೇಗನೆ ಪೆವಿಲಿಯನ್ ಸೇರಿಕೊಂಡರು. ಪಾಕ್ನ ಸಯ್ಯದ್ ಅಯೂಬ್, ಸೂಫಿಯಾನ್ ಮುಖೀಮ್ ಮತ್ತು ಫಹೀಮ್ ಅಶ್ರಫ್ ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಲು ನಿರ್ಧರಿಸಿದ ಪಾಕ್ 20 ಓವರ್ಗಳಲ್ಲಿ 7 ವಿಕೆಟ್ಗೆ 160 ರನ್ ಗಳಿಸಿತು.ತಂಡದ ಪರ ಮೊಹಮ್ಮದ್ ಹ್ಯಾರಿಸ್ (66, 43ಎ) ಅರ್ಧಶತಕದ ಸಿಡಿಸಿ ನೆರವಾದರು. ಸಾಹಿಬ್ಝಾದಾ ಪರ್ಹಾನ್ (29, 29ಎ)
ಫಖರ್ ಜಮಾನ್ ಔಟಾಗದೇ 23 ರನ್ ಗಳಿಸಿದರು. ಒಮಾನ್ ಪರ ಶಾ ಫೈಸಲ್ 34ಕ್ಕೆ3, ಆಮೀರ್ ಕಲೀಮ್ 31ಕ್ಕೆ3 ವಿಕೆಟ್ ಪಡೆದರು.












