ಸುಳ್ಯ:ಯುವ ಕಲಾವಿದೆ, ರೂಪದರ್ಶಿ ಸುಳ್ಯದ ಶ್ವೇತಾ ಎಂ ನಾಯಕ್ ನಿರ್ದೇಶಿಸಿರುವ ಓಣಂ ಹಬ್ಬದ ಮಹತ್ವ ಮತ್ತು ವಿಶೇಷತೆ ಸಾರುವ ಮಲಯಾಳಂ ಕಿರು ಚಿತ್ರ ‘ಕುಂಞುವಾವೆಂಡೆ ಮಾವೇಲಿ’ ಬಿಡುಗಡೆಗೊಂಡಿದೆ. ಮಕ್ಕಳ ಮನಸ್ಸಿನಲ್ಲಿ ಅರಳುವ ಓಣಂ ಸಂಭ್ರಮವನ್ನು ಮನಮೋಹಕವಾಗಿ ಚಿತ್ರದಲ್ಲಿ ಪ್ರಸ್ತುತಪಡಿಸಲಾಗಿದೆ. ಓಣಂ ಪ್ರಯುಕ್ತ ಮಹಾಬಲಿಯ ಗೃಹ ಪ್ರವೇಶ, ಮಹಾಬಲಿಯನ್ನು ಸ್ವಾಗತಿಸುವುದು, ಓಣಂ ಸದ್ಯ, ಓಣಂ ಹಬ್ಬದ
ಆಕರ್ಷಕ ಹಾಡುಗಳು, ತಿರುವಾದಿರ, ವಿವಿಧ ನೃತ್ಯಗಳ ಮೂಲಕ ಸುಮಾರು 35 ನಿಮಿಷದ ಕಿರು ಚಿತ್ರ ಆಕರ್ಷಕವಾಗಿ ಮೂಡಿ ಬಂದಿದೆ. ಉಯ್ಯಾಲೆಗಳು ತುಂಬಿತುಳ್ಳಲ್, ಉಮ್ಮಾಟಿಕಳಿ, ಓಣತಪ್ಪನ್ ಮೊದಲಾದ ಬಗುಬಗೆಯ ಸಾಂಸ್ಕೃತಿಕ ಕ್ರೀಡಾವಿನೋದಗಳು, ಓಣಂ ಹಬ್ಬದ ಸಮೃದ್ಧವಾದ ಬಗು ಬಗೆಯ ಖಾದ್ಯ ವೈವಿಧ್ಯತೆಗಳ ಭೋಜನ ವೈಶಿಷ್ಟ್ಯ, ಹೊಸ ಬಟ್ಟೆ ಧರಿಸುವ ಸಂಭ್ರಮಗಳು ಕಿರು ಚಿತ್ರದಲ್ಲಿ ಮೂಡಿ ಬಂದಿದೆ. ರಚನೆ, ನಿರ್ದೇಶನ, ನೃತ್ಯ ಸಂಯೋಜನೆ ಹಾಗು ನಿರ್ಮಾಣವನ್ನು ನಿರ್ವಹಿಸಿರುವ ಶ್ವೇತಾ ಎಂ ನಾಯಕ್ ಕಿರು ಚಿತ್ರದಲ್ಲಿ ಅಭಿನಯಿಸಿ ರಂಗು ತಂದಿದ್ದಾರೆ. ಪವಿತ್ರನ್ ಗುಂಡ್ಯ ಭಾಷಾನುವಾದ ಮಾಡಿದ್ದಾರೆ. ಅಲ್ಲದೆ ಕಿರು ಚಿತ್ರದಲ್ಲಿ ಅಹಲ್ಯ ಪವಿತ್ರನ್,ಸ್ವಪ್ನಾ ಪವಿತ್ರನ್, ಪವಿತ್ರನ್ ಗುಂಡ್ಯ
ಸರಿತ .ಪಿ,ಆಧ್ಯಾ.ಪಿ,ಸೌಮ್ಯಾ ವಿವೇಕ್,ಕಾವ್ಯ ಪ್ರಸಾದ್, ಜಿಶಾನ್ ಪ್ರಸಾದ್,ಜೀಶ್ಮ ಪ್ರಸಾದ್,ಸುಜಾತ.ಜಿ,ಕೃಷ್ಣ ಕುಮಾರ್,ಯಶಸ್ಸ್ .ಕೆ,
ಸುನಿತಾ ಪ್ರಸಾದ್, ಸುಕುಮಾರನ್.ಬಿ, ಅಂಬಿಕಾ ಕುಂಞಿರಾಮನ್ಅನನ್ಯ, ಭಾವನಾ,ಆರ್ಚಾ ಪ್ರೇಮ್, ರಾಮಚಂದ್ರ,ಚರಣಕೃಷ್ಣ, ಅಧ್ವಿತ್ ಆಕಾಶ್ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಯೂಟ್ಯೂಬ್ನಲ್ಲಿ ಕಿರು ಚಿತ್ರ ವೀಕ್ಚಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ: