ಸುಳ್ಯ:ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ನ ಎನ್.ಎಸ್.ಎಸ್. ಹಿರಿಯ ವಿದ್ಯಾರ್ಥಿಗಳ ಸಂಘ ಎನ್.ಎಸ್.ಎಸ್. ಸೇವಾಸಂಗಮ ಟ್ರಸ್ಟ್ ವತಿಯಿಂದ 77 ನೇ ಸ್ವಾತಂತ್ರ್ಯೋತ್ಸವ ಆಚರಣೆಯು ಸುಳ್ಯದ ಜ್ಯೋತಿ ವೃತ್ತ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.ಸೇವಾ ಸಂಗಮದ
ಗೌರವಾದ್ಯಕ್ಷರಾದ ಬಾಲಕೃಷ್ಣ ಬೊಳ್ಳೂರು ಧ್ವಜಾರೋಹಣ ನೆರವೇರಿಸಿದರು. ಸೇವಾಸಂಗಮದ ಸಲಹಾ ಸಮಿತಿಯ ಸದಸ್ಯೆ ಡಾ. ಅನುರಾಧಾ ಕುರುಂಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸೇವಾಸಂಗಮದ ಗೌರವ ಸಲಹೆಗಾರ ಚಂದ್ರಶೇಖರ ಬಿಳಿನೆಲೆ,ಪಾಲಚಂದ್ರ ವೈ ವಿ , ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಉಪಸ್ಥಿತರಿದ್ದರು.
ಸೇವಾಸಂಗಮದ ಸದಸ್ಯರಾದ ಹೇಮನಾಥ್ ಸ್ವಾಗತಿಸಿ, ವಿಶ್ವಕಿರಣ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು ಆಕಾಶ್ ಕುದ್ಕುಳಿ, ಹೃತ್ವಿಕ್ ಕುದ್ಕುಳಿ , ಅಂಗನವಾಡಿ ಪುಟಾಣಿಗಳು, ಹಾಗೂ ಪೋಷಕರು ಉಪಸ್ಥಿತರಿದ್ದರು.