ಸುಳ್ಯ:ಜನರ ಭಾವನೆಗಳನ್ನು ಗೌರವಿಸಿ ಅವರ ಪ್ರೀತಿಯನ್ನು ಗಳಿಸಿಕೊಂಡು ಸಮಾಜವನ್ನು ಅರ್ಥೈಸಿಕೊಂಡು ಬದುಕುವುದೇ ನಿಜವಾದ ಜೀವನ ಎನ್ ಎಸ್ ಎಸ್ ಶಿಬಿರಗಳಿಂದ ಇಂತಹ ಜೀವನದ ಪಾಠಗಳನ್ನು ಕಲಿಯಲು ಸಾಧ್ಯ ಇದೆ. ಇಂತಹ ಪಾಠಗಳು ಪ್ರಸ್ತುತ ಜೀವನಕ್ಕೆ ಅಗತ್ಯ ಇದೆ ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸುಬ್ಬಪ್ಪ ಕೈಕಂಬ ಹೇಳಿದರು.ಅವರು ಸುಳ್ಯ ತಾಲೂಕಿನ
ಮಂಡೆಕೋಲಿನಲ್ಲಿ ನಡೆದ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸತೀಶ್ ಎನ್ ಪಿ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ಉಪಾಧ್ಯಕ್ಷ ಮುರಳೀಧರ ರೈ, ಪ್ರಾ.ಕೃ.ಪ.ಸೇ.ಸ.ಸಂಘದ ನಿರ್ದೆಶಕ ಲಕ್ಷ್ಮಣ ಉಗ್ರಾಣಿಮನೆ, ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಪ್ರೀತಿ ಕೆ ರಾವ್,ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳಾ ಅತ್ಯಾಡಿ, ಸಾವಿತ್ರಿ ಕಣೆಮರಡ್ಕ ಉಪಸ್ಥಿತರಿದ್ದರು. ಎನ್ಎಸ್ಎಸ್ ಶಿಬಿರಾಧಿಕಾರಿಗಳಾದ ಡಾ.ಮೊನಿಷಾ.ಕೆ ಹಾಗೂ ಕಿಶೋರ್ ಕುಮಾರ್ ಬಿ.ಡಿ, ಎನ್ ಎಸ್ ಎಸ್ ನಾಯಕರಾದ ಬಿಂದುಶ್ರೀ ಎಂ ಎಸ್, ಅಭಿಜ್ಞಾ ಎ ಎಸ್, ಚೈತನ್ ಬಿ, ಹಂಸಿನಿ ಪಿ ಎಸ್, ಯತೀಶ್ ಎಂ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದ ಬಗ್ಗೆ ಶಿಬಿರಾರ್ಥಿಗಳಾದ ಭಾಗ್ಯಶ್ರೀ ಕೆ.ಡಿ, ಅಭಿಜ್ಞಾ ಎ ಎಸ್, ಯತೀಶ್ ಎಂ.ಬಿ ಹಾಗೂ ರಜತ್ ಅನಿಸಿಕೆ ವ್ಯಕ್ತ ಪಡಿಸಿದರು. ಶಿಬಿರಾಧಿಕಾರಿಗಳಾದ ಡಾ.ಮೊನಿಷಾ ಕೆ ಹಾಗೂ ಕಿಶೋರ್ ಕುಮಾರ್ ಬಿ.ಡಿ ಮತ್ತು ಸಹಶಿಬಿರಾಧಿಕಾರಿಗಳಾದ ರಾಮಕೃಷ್ಣ ಕೆ ಎಸ್ ಹಾಗೂ ಬಾಲಕೃಷ್ಣ ಪಿ ಎಸ್ ರವರನ್ನು ಶಾಲಾ ಪರವಾಗಿ ಗೌರವಿಸಲಾಯಿತು. ಶಾಲಾ ಗೋಡೆಗಳಲ್ಲಿ ಕಲಾಕೃತಿಗಳನ್ನು ರಚಿಸಿದ ವಿದ್ಯಾರ್ಥಿಗಳನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಡಾ ಮೊನಿಷಾ ಸ್ವಾಗತಿಸಿ, ಕಿಶೋರ್ ಕುಮಾರ್ ಬಿ.ಡಿ ವಂದಿಸಿದರು. ಶಿಬಿರಾರ್ಥಿ ವಕ್ಷಿತಾ ಹೆಚ್ ಕರ್ಯಕ್ರಮ ನಿರೂಪಿಸಿದರು.








