ಸುಳ್ಯ:ಸುಳ್ಯದ ಪ್ರತಿಷ್ಠಿತ ನೆಹರೂ ಸ್ಮಾರಕ ಮಹಾವಿದ್ಯಾಲಯಕ್ಕೆ ಸುವರ್ಣ ಸಂಭ್ರಮ.1976ರಲ್ಲಿ ಪ್ರಾರಂಭಗೊಂಡ ಎನ್ಎಂಸಿಗೆ ಅಇದೀಗ ಸುವರ್ಣ ಸಂಭ್ರಮದ ಹರುಷ ಡಾ.ಕುರುಂಜಿ ವೆಂಕಟ್ರಮಣ ಗೌಡ ಅವರು ಸ್ಥಾಪಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಡಿಯಲ್ಲಿ ಸ್ಥಾಪಿಸಿದ ಮೊದಲ ಶಿಕ್ಷಣ ಸಂಸ್ಥೆ ನೆಹರು ಸ್ಮಾರಕ ಮಹಾವಿದ್ಯಾಲಯ.ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ಧಾರೆಯೆರೆದ ಎನ್ಎಂಸಿ ಗ್ರಾಮೀಣ ಭಾಗದಲ್ಲಿ
ಅಕ್ಷರಷಃ ಶಿಕ್ಷಣ ಕ್ರಾಂತಿಯನ್ನೆ ಮಾಡಿದೆ. ಇದೀಗ ಸಂಸ್ಥೆಗೆ 50 ವರ್ಷ ತುಂಬಿರುವ ಹಿನ್ನಲೆಯಲ್ಲಿ ವರ್ಷ ಪೂರ್ತಿ ಕಾರ್ಯಕ್ರಮ ನಡೆಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಕಾಲೇಜಿನ ಸ್ಥಾಪಕರಾದ ಡಾ.ಕುರುಂಜಿ ವೆಂಕಟ್ರಮಣ ಗೌಡರ ಹುಟ್ಟು ಹಬ್ಬದ ದಿನದ ಪ್ರಯುಕ್ತ ನಡೆದ ಸ್ಥಾಪಕರ ದಿನಾಚರಣೆಯಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಕಾರ್ಯಕ್ರಮದ ಲೋಗೋ ಹಾಗೂ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಗಿದೆ.

2026ರಲ್ಲಿ ವರ್ಷ ಪೂರ್ತಿ ಜನವರಿಯಿಂದ ಡಿಸೆಂಬರ್ ತನಕ ಪ್ರತಿ ತಿಂಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜನವರಿ ತಿಂಗಳಲ್ಲಿ ರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಏರ್ಪಡಿಸಲಾಗಿದೆ, ಫೆಬ್ರುವರಿ ತಿಂಗಳಿನಲ್ಲಿ ಸ್ಥಳೀಯ ಭಾಷೆಗಳ ಕುರಿತು ರಾಷ್ಟ್ರೀಯ ವಿಚಾರ ಸಂಕೀರ್ಣ ಏರ್ಪಡಿಸಲಾಗಿದೆ. ಪ್ರಥಮ ದಿನ ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಎರಡನೇ ದಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಕಾರ್ಯಗಾರ ನಡೆಯಲಿದೆ.ಮಾರ್ಚ್ ತಿಂಗಳಲ್ಲಿ ವಿಶ್ವವಿದ್ಯಾಲಯ ಮಟ್ಟದ ಕಬಡ್ಡಿ ಪಂದ್ಯಾಟ, ವಿಶ್ವ ಮಹಿಳಾ ದಿನಾಚರಣೆ ನಡೆಯಲಿದೆ.ಎಪ್ರಿಲ್ ತಿಂಗಳಿನಲ್ಲಿ ಸ್ವಾಸ್ಥ್ಯ ಮೇಳ ನಡೆಯಲಿದೆ.ಕಾಲೇಜಿನ ಸಿಬ್ಬಂದಿ ಮತ್ತು ವಿಧ್ಯಾರ್ಥಿಗಳಿಗೆ ಆರೋಗ್ಯ ಶಿಬಿರ , ವಿಚಾರಗೋಷ್ಠಿ ನಡೆಯಲಿದೆ. ಮೇ ತಿಂಗಳಿನಲ್ಲಿ ಮೇ ದಿನಾಚರಣೆ, ಕಾರ್ಮಿಕರ ಸಮಸ್ಯೆ, ಸವಾಲುಗಳು ಮತ್ತು ಬಾಲಕಾರ್ಮಿಕರ ಸಮಸ್ಯೆಯ ಬಗ್ಗೆ ಪದವಿ ವಿಧ್ಯಾರ್ಥಿಗಳಿಗೆ ರೂಪಕ ಪ್ರದರ್ಶನಗಳ ಸ್ಪರ್ಧೆ ಏರ್ಒಡಿಸಲಾಗುವುದು.

ಸುವರ್ಣ ಮಹೋತ್ಸವದ ಲೋಗೋ ಬಿಡುಗಡೆ
ಜೂನ್ ತಿಂಗಳಿನಲ್ಲಿ ಕೃಷಿ ಕ್ಷೇತ್ರದಲ್ಲಿ ನೂತನ ಕೃಷಿ ತಾಂತ್ರಿಕತೆ ಮತ್ತು ಉಪಕರಣಗಳ ಬಗ್ಗೆ ಸಿಪಿಸಿಆರ್ಐ ಸಹಯೋಗದಲ್ಲಿ ಕಾರ್ಯಗಾರ, ಸುವರ್ಣ ಮಹೋತ್ಸವ ನೆನಪಿಗಾಗಿ ವನಮಹೋತ್ಸವ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ. ಜುಲೈ ತಿಂಗಳಿನಲ್ಲಿ ವಿಜ್ಞಾನ ಮಾದರಿ ಸ್ಪರ್ಧೆಗಳ ಬಗ್ಗೆ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಕಾರ್ಯಗಾರ, ಆಗಸ್ಟ್ ತಿಂಗಳಿನಲ್ಲಿ ಪದವಿಪೂರ್ವ ವಿಧ್ಯಾರ್ಥಿಗಳಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆ ‘ಅಂತರ್ ಕಾಲೇಜ್ ಫೆಸ್ಟ್’ ನಡೆಯಲಿದೆ. ಸೆಪ್ಟೆಂಬರ್ನಲ್ಲಿ ಕೆಸರುಗದ್ದೆ ಉತ್ಸವ ,ಡಾ.ಕೆವಿಜಿ ಸಾಧನೆಗಳ ಬಗ್ಗೆ ಸರಣಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಗಣೇಶೋತ್ಸವ ಓಣಂ ಆಚರಣೆ ನಡೆಯಲಿದೆ. ಅಕ್ಟೋಬರ್ ತಿಂಗಳಲ್ಲಿ ಡಾ. ಕೆವಿಜಿ ಸಾಧನೆಗಳ ಬಗ್ಗೆ ಉಪನ್ಯಾಸ, ನವಂಬರ್ ಕ್ರೀಡಾ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ.

ಸುವರ್ಣ ಮಹೋತ್ಸವದ ಕೈಪಿಡಿ ಬಿಡುಗಡೆ
ಡಿಸೆಂಬರ್ ತಿಂಗಳಲ್ಲಿ ಸುವರ್ಣ ಮಹೋತ್ಸವ ಆಚರಣೆಯ ಸಮಾರೋಪ ಕಾಲೇಜು ವಾರ್ಷಿಕೋತ್ಸವ, ಹಿರಿಯ ವಿಧ್ಯಾರ್ಥಿಗಳ ಸಮಾವೇಷ, ಮತ್ತು ಸ್ಥಾಪಕರ ದಿನಾಚರಣೆ ನಡೆಯಲಿದೆ. ಹೀಗೆ ವರ್ಷ ಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.








