ಸುಳ್ಯ: ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಜಾನಪದ ಸೊಗಡನ್ನು ಉಣ ಬಡಿಸುವ ಉದ್ದೇಶದಿಂದ ಅರಂಬೂರಿನಲ್ಲಿ ಕೆಸರುಗದ್ದೆ ಆಟೋಟಗಳನ್ನು ಆಯೋಜಿಸಿತು. ಕಾಲೇಜಿನ ಉಪನ್ಯಾಸಕರಾದ ದೀಕ್ಷಿತ್ ಸ್ವಾಗತಿಸಿದರು. ಮಾಜಿ ನಗರ ಪಂಚಾಯತ್ ಅಧ್ಯಕ್ಷರಾದ ಎನ್ ಎ ರಾಮಚಂದ್ರ ಸಾಂಪ್ರದಾಯಿಕ ರೀತಿಯಲ್ಲಿ
ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಜ್ವಲ್ ಯು ಜೆ ಅವರು ಶುಭ ಹಾರೈಸಿದರು. ನಿವೃತ್ತ ಸೈನಿಕರು ಹಾಗೂ ಪೋಷಕರಾದ ಮೋಹನ್ ಲಾಲ್ ಪಡ್ಪು , ಹರೀಶ್ ಪಿ ಎಲ್ ಸಹಕರಿಸಿದರು. ಪ್ರಕೃತಿಯ ಮಡಿಲಲ್ಲಿ ಸಂಸ್ಥೆಯು ಆಯೋಜಿಸಿದ ಹಗ್ಗ ಜಗ್ಗಾಟ ,ಫುಟ್ಬಾಲ್, ತ್ರೋಬಾಲ್, ಡಾರ್ಜ್ ಬಾಲ್ ಜೊತೆಗೆ ಹಲವು ಸಾಂಪ್ರದಾಯಿಕ ಆಟಗಳ ಸ್ಪರ್ಧೆಯಿಂದ
ವಿದ್ಯಾರ್ಥಿಗಳಲ್ಲಿ ಸಂತಸವು ಮನೆ ಮಾಡಿತು.ಕಾರ್ಯಕ್ರಮಕ್ಕೆ
ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ ವಿ,ಟ್ರಸ್ಟಿ ಡಾ. ಜ್ಯೋತಿ ಆರ್ ಪ್ರಸಾದ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ, ಸ್ಥಳೀಯರಾದ ಕುಶಾಲಪ್ಪ ಹಾಗೂ ಡೆಂಟಲ್ ಕಾಲೇಜಿನ ಕಚೇರಿ ಅಧಿಕ್ಷಕ ಮಾಧವ ಬಿ ಟಿ,ಎಲ್ಲಾ ವಿದ್ಯಾರ್ಥಿಗಳು ಹಾಗೂ ಭೋದಕ ಭೋದಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ರಾಜೇಶ್ ವಂದಿಸಿದರು.ಮಲ್ಲಿಕಾ ಎಂ ಎಲ್ ನಿರೂಪಿಸಿದರು