ಸುಳ್ಯ:ಸುಳ್ಯ ತಹಶಿಲ್ದಾರ್ ಆಗಿ ಜಿ.ಮಂಜುನಾಥ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ನ.6ರಂದು ಅವರು ಸುಳ್ಯ ಮಿನಿ ವಿಧಾನ ಸೌಧದ ತಹಶೀಲ್ದಾರ್ ಕಚೇರಿಯಲ್ಲಿ ಅವರು ಅಧಿಕಾರ ವಹಿಸಿಕೊಂಡರು. ಪ್ರಭಾರ ತಹಶೀಲ್ದಾರ್ ಎಂ.ಮಂಜುನಾಥ್ ಅಧಿಕಾರ ಹಸ್ತಾಂತರ ಮಾಡಿದರು.ತುಮಕೂರು ತಾಲೂಕಿನವರಾದ

ಜಿ.ಮಂಜುನಾಥ್
ಜಿ.ಮಂಜುನಾಥ್ ಅವರು ಬೆಂಗಳೂರಿನಿಂದ ವರ್ಗಾವಣೆಯಾಗಿ ಸುಳ್ಯ ತಾಲೂಕು ಗ್ರೇಡ್ 1 ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ, ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ, ವಿರಾಜಪೇಟೆ, ಚೆನ್ನರಾಯಪಟ್ಟಣ, ಮಂಡ್ಯದಲ್ಲಿ ಅವರು ಸೇವೆ ಸಲ್ಲಿಸಿದ್ದರು. ಈ ಹಿಂದೆ ಸುಳ್ಯ ತಹಶೀಲ್ದಾರ್ ಆಗಿದ್ದ ಜಿ.ಮಂಜುನಾಥ್ ಅವರು ವರ್ಗಾವಣೆಯಾದ ಬಳಿಕ ಎಂ.ಮಂಜುನಾಥ್ ಅವರು ಪ್ರಭಾರ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.









