ಸುಳ್ಯ:ಒಂದು ರವಿಕೆಯ ಸುತ್ತ ಹೆಣೆದ ಸುಂದರವಾದ ಕಥೆಯೊಂದಿಗೆ ಪ್ರೇಕ್ಷಕರನ್ನು ನಕ್ಕು ನಗಿಸಲು ಸದ್ಯದಲ್ಲಿಯೇ ತೆರೆಯ ಮೇಲೆ ಬರಲಿದೆ ಸುಳ್ಯದವರಾದ ಚಿತ್ರ ನಿರ್ದೇಶಕ ಸಂತೋಷ್ ಕೊಡೆಂಕೇರಿ ನಿರ್ದೇಶಿಸಿದ ಹಾಸ್ಯ ಪ್ರದಾನ ಚಿತ್ರ ‘ರವಿಕೆ ಪ್ರಸಂಗ. ಸ್ವಾರಷ್ಯಕರ ವಿಷಯವನ್ನು ಮುಂದಿಟ್ಟು ಮನರಂಜನಾತ್ಮಕವಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ.
ದಕ್ಷಿಣ ಕನ್ನಡ ಸುಳ್ಯದ ಹಳ್ಳಿಯಲ್ಲಿ ನಡೆಯುವ ಕಥೆ. ನಾಯಕಿಗೆ ಸೀರೆಗೆ ಒಳ್ಳೆ ಡಿಸೈನ್ ರವಿಕೆ ಹೊಲಿಸಲು ಡಿಸೈನರನ್ನು ಹುಡುಕುತ್ತಿರುತ್ತಾಳೆ, ಆದರೆ
ಕಾರಣಾಂತರಗಳಿಂದ ಅವಳಿಗೆ ಯಾವುದೇ ಡಿಸೈನರ್ ಸಿಗುವುದಿಲ್ಲ.ಆಗ ಅವಳ ಊರಿನಲ್ಲಿರುವ ಲೇಡೀಸ್ ಟೈಲರ್ ಬಳಿ ಆ ಡಿಸೈನ್ ರವಿಕೆ ಅನ್ನು ಹೊಲಿಸಲು ನಿರ್ಧರಿಸುತ್ತಾಳೆ. ಆ ಟೈಲರ್ ಮತ್ತು ಹೀರೋಯಿನ್ ನಡುವೆ ನಡೆದ ಘಟನೆಗಳನ್ನು ಆಧರಿಸಿ ಮನರಂಜನಾತ್ಮಕ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಸಂತೋಷ್ ಕೊಂಡಕೇರಿ. ಚಿತ್ರದಲ್ಲಿ ಹಿರಿ ಕಿರಿಯ ಕಲಾವಿದರ ದೊಡ್ಡ ದಂಡೇ ಇದ್ದು ಪ್ರೇಕ್ಷಕರಿಗೆ ರವಿಕೆ ಪ್ರಸಂಗದ ಮೂಲಕ
ಮನರಂಜನೆ ನೀಡಿದ್ದಾರೆ. ಚಿತ್ರದಲ್ಲಿ ಗೀತಾ ಭಾರತಿ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಂಪತ್ ಮೈತ್ರೇಯಾ, ಪದ್ಮಜಾ ರಾವ್,ಸುಮನ್ ರಂಗನಾಥ್, ರಾಕೇಶ್ ಮಯ್ಯ, ಕೃಷ್ಣಮೂರ್ತಿ ಕವತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್. ಮೀನಾ.ಹನುಮಂತೇ ಗೌಡ, ಖುಷಿ ಆಚಾರ್ ಹನುಮಂತ್ ರಾವ್ ಕೆ ಸೇರಿದಂತೆ ಇತರೆ ತಾರಾಬಳಗ ಚಿತ್ರದಲ್ಲಿದೆ.
ಸಂತೋಷ್ ಕೊಡೆಂಕೇರಿ ಮತ್ತು ಪಾವನಾ ಸಂತೋಷ್
ಚಿತ್ರದ ಟೀಸರ್ ಹಾಗೂ ಟೈಟಲ್ ಸಾಂಗ್ ಬಿಡುಗಡೆಯಾಗಿದ್ದು ಈಗಾಗಲೇ ಟ್ರೆಂಡಿಂಗ್ ಆಗಿದೆ. ಚಿತ್ರದ ಹಾಡುಗಳು ಬಿಡುಗಡೆಗೆ ಸಿದ್ಧಗೊಂಡಿದೆ. ಚಿತ್ರ ಸದ್ಯದಲ್ಲಿಯೇ ಬಿಡುಗಡೆ ಅಗಲಿದೆ ಎಂದು ನಿರ್ದೇಶಕ ಸಂತೋಷ್ ಕೋಡಂಕೇರಿ ಹೇಳಿದ್ದಾರೆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರೂ ಕೂಡ ಅದ್ಭುತವಾಗಿ ನಟಿಸಿದ್ದಾರೆ. ರವಿಕೆ ಪ್ರಸಂಗವನ್ನೇ ಪ್ರಮುಖವಾಗಿರಿಸಿಕೊಂಡು ಟ್ರೈಲರ್, ಪೊಲೀಸ್ ಠಾಣೆ, ನ್ಯಾಯಾಲಯದ ಸುತ್ತ ಕಥೆ ಸಾಗಲಿದೆ ಎಂದು ಕೊಡೆಂಕೇರಿ ಹೇಳಿದ್ದಾರೆ.
ಗಮನ ಸೆಳೆದ ಭಿನ್ನ ಟೈಟಲ್:
ಕನ್ನಡದಲ್ಲಿ ಭಿನ್ನ-ವಿಭಿನ್ನ ಟೈಟಲ್ಗಳನ್ನಿಟ್ಟುಕೊಂಡು ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ಸೇರುವ ಸಿನಿಮಾ ‘ರವಿಕೆ ಪ್ರಸಂಗ’. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಟೀಸರ್,ಟೈಟಲ್ ಸಾಂಗ್ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದ್ದು ಕುತೂಹಲ ಕೆರಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ದೃಷ್ಟಿಮೀಡಿಯಾ ಪ್ರೊಡಕ್ಷನ್ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ರವಿಕೆ ಸಾಂಗ್ ಅನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಗೀತಾ ಭಾರತಿ ಭಟ್ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಝೇಂಕಾರ್ ಮ್ಯೂಸಿಕ್ ಚಿತ್ರದ ಆಡಿಯೋ ರೈಟ್ಸ್ ಪಡೆದಿದೆ. ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ ಸಂಭಾಷಣೆ ಬರೆದಿದ್ದಾರೆ.
ಒಂದು ರವಿಕೆಯ ಸುತ್ತ..
ಸಾಮಾನ್ಯವಾಗಿ ಸೀರೆ ಅಂದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟ ಅದರಲ್ಲೂ ಸೀರೆ ಎಷ್ಟು ಚೆನ್ನಾಗಿರುತ್ತೋ, ಅಷ್ಟೇ
ಸುಂದರವಾಗಿ ರವಿಕೆ ಇರಬೇಕು. ಸಾವಿರಾರೂ ಖರ್ಚು ಮಾಡಿ ರವಿಕೆ ಹೊಲಿಸುತ್ತಾರೆ. ಒಂದು ಸಮಾರಂಭಕ್ಕೆ ಇಂಥದ್ದೇ ಸೀರೆ ಹೀಗೆ ಇರಬೇಕು ಅಂತ ಆಸೆಯಿಂದ ಒಳ್ಳೆ ಟೈಲರ್ ಹತ್ತಿರ ರವಿಕೆ ಹೊಲಿಸುತ್ತಾರೆ. ಆದರೆ, ಪ್ರತಿ ಬಾರಿ ಆ ರವಿಕೆ ಪರ್ಫೆಕ್ಟ್ ಆಗಿ ಇರಲ್ಲ, ಏನೋ ಒಂದು ಸರಿಯಾಗಿರಲ್ಲ. ಇಂಥದ್ದೇ ಸರಿ ಹೊಂದದ ರವಿಕೆಯ ರಗಳೆಯ ಕಾಮಿಡಿ ಕಥೆ ‘ರವಿಕೆ ಪ್ರಸಂಗ’. ಚಿತ್ರದಲ್ಲಿ ಒಂದು ರವಿಕೆಯಿಂದ ನಾಯಕಿಯ ಏನೆಲ್ಲಾ ಬದಲಾವಣೆ ಆಗುತ್ತೆ ಜೀವನದಲ್ಲಿ ಎನ್ನುವುದನ್ನು ಹೇಳಲಾಗಿದ್ದು, ಚಿತ್ರದಲ್ಲಿ ಮಂಗಳೂರು ಕನ್ನಡ ಶೈಲಿ ಬಳಸಲಾಗಿದೆ. ಸುಳ್ಯ ಸುತ್ತಮುತ್ತಲು ಚಿತ್ರೀ ಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿದೆ.
ಚಿತ್ರ ತಂಡ
ಹೋಂ ಸ್ಟೇ ಮೂಲಕ ಖ್ಯಾತರಾದ ಕೊಡೆಂಕೇರಿ:
ಈ ಹಿಂದೆ ಕನ್ನಡದಲ್ಲಿ ‘ಹೋಂ ಸ್ಟೇ’ ಚಿತ್ರದ ಮೂಲಕ ತೆರೆಗೆ ಬಂದಿದ್ದ ಸಂತೋಷ್ ಕೂಡೆಂಕೇರಿ ಇದೀಗ ‘ರವಿಕೆ ಪ್ರಸಂಗ’ ಚಿತ್ರದ ಮೂಲಕ ಮತ್ತೆ ತೆರೆಗೆ ಬರಲು ಸಿದ್ಧರಾಗಿದ್ದಾರೆ. ‘ದೃಷ್ಟಿ ಮೀಡಿಯಾ’ ಪ್ರೊಡಕ್ಷನ್ ಇವರ ಎರಡನೇ ಕಾಣಿಕೆಯಾಗಿರುವ ‘ರವಿಕೆ ಪ್ರಸಂಗ’ ಚಿತ್ರಕ್ಕೆ ಶಂತನು ಮಹರ್ಷಿ, ನಿರಂಜನ್ ಗೌಡ, ಗಿರೀಶ್ ಎಸ್ ಎಂ, ಶಿವರುದ್ರಯ್ಯ ಎಸ್.ಎ ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫಸ್ಬುಕ್ ರಿಲೀಸ್ ಆಗಿದ್ದು ನಟಿ ರಚಿತಾ ರಾಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ
ಫಸ್ಟ್ಲುಕ್ ರಿಲೀಸ್ ಮಾಡಿ ಶುಭ ಕೋರಿದ್ದಾರೆ. ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ ಸಂಭಾಷಣೆ ಬರೆದಿದ್ದು, ಸಂತೋಷ್ ಕೊಡಂಕೇರಿ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.