ಸುಳ್ಯ: ತಾಲೂಕು ಯುವಜನ ಒಕ್ಕೂಟ ಕಡಬ, ತಾಲೂಕು ರೈತ ಯುವಕ ಯುವಕ ಮಂಡಲ ಏನೆಕಲ್ ಹಾಗೂ ರೈತ ಯುವಕ ಮಂಡಲ ಕಟ್ಟಡ ರಚನಾ ಸಮಿತಿ ಏನೆಕಲ್ ಇದರ ಜಂಟಿ ಆಶ್ರಯದಲ್ಲಿ ಕಡಬ ತಾಲೂಕು ನೋಂದಾಯಿತ ಯುವಕ ಯುವತಿ ಮಂಡಲದ ಪದಾಧಿಕಾರಿಗಳಿಗೆ ನಾಯಕತ್ವ ತರಬೇತಿ ಶಿಬಿರ ಹಾಗೂ
ರಾಷ್ಟೀಯ ಕಬಡ್ಡಿ ಆಟಗಾರ ಮಿಥುನ್ ಗೌಡ ಮಲ್ಲಾರ ಇವರಿಗೆ ಅಭಿನಂದನಾ ಸಮಾರಂಭ ಏನೇಕಲ್ಲಿನ ರೈತ ಯುವಕ ಮಂಡಲ ಸಭಾಭವನದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಮನುದೇವ್ ಪರಮಲೆ ಅವರು ವಹಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿಗಳಾದ ಮಾಧವ ಗೌಡ ಮಲ್ಲಾರ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮುಸಿದ ಕಬಡ್ಡಿ ತರಬೇತುದಾರರಾದ ಬಿ ಕೆ ಮಾಧವ, ಯುವ ಜನ ಒಕ್ಕೂಟ ಅಧ್ಯಕ್ಷರಾದ ಶಿವಪ್ರಸಾದ್ ಮೈಲೀರಿ ಶುಭ ಹಾರೈಸಿದರು.ರಾಷ್ಟೀಯ ಕಬಡ್ಡಿ ಆಟಗಾರರಾದ ಮಿಥುನ್ ಗೌಡ ಮಲ್ಲಾರ ಅವರಿಗೆ ಸನ್ಮಾನವನ್ನು ಬಿಕೆ ಮಾಧವ ನೆರವೇರಿಸಿದರು. ಶಿಬಿರಾರ್ಥಿಗಳಿಗೆ ನಾಯಕತ್ವ ತರಬೇತಿಯನ್ನು ಸೀತಾರಾಮ ಕೇವಳ ಹಾಗೂ ದಾಮೋದರ ಕಣಜಾಲು ನೀಡಿದರು. ಚಂದ್ರಶೇಖರ ನೈರ್ ಸ್ವಾಗತಿಸಿ, ವಿಜಯ್ ಕುಮಾರ್ ಅಮೈ ನಿರೂಪಿಸಿ ಸಾತ್ವಿಕ್ ಚಿದ್ಗಲ್ ವಂದಿಸಿದರು.









