ಸುಳ್ಯ:ಭಾರತೀಯ ಜೀವ ವಿಮಾ ನಿಗಮದ ಅಧಿಕೃತ LIC ಪ್ರೀಮಿಯಂ ಸ್ವೀಕೃತಿ ಮತ್ತು ಪಾಲಿಸಿದಾರರ ಸೇವಾ ಕೇಂದ್ರ, ಕೆ.ಶಂಕರಲಿಂಗಂ ನೇತೃತ್ವದ ‘ಮುತ್ತುಶ್ರೀ ಎಂಟರ್ಪ್ರೈಸಸ್’ ಸೆ.5ರಂದು ಸುಳ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದ ಸೂಂತೋಡು ಎಂಪೋರಿಯಂನಲ್ಲಿ ಕಾರ್ಯಾರಂಭ ಮಾಡಿತು. ಶಾಸಕಿ ಭಾಗೀರಥಿ ಮುರುಳ್ಯ ಕೇಂದ್ರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಭಾರತೀಯ
ಜೀವ ವಿಮಾ ನಿಗಮದ ಪುತ್ತೂರು ಶಾಖೆಯ ಮುಖ್ಯ ಪ್ರಬಂಧಕರಾದ ಉಜ್ವಲ್ ಹೆಚ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸದಸ್ಯ ಕೆ.ಪಿ. ಜಾನಿ ಕಲ್ಲುಗುಂಡಿ, ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ಸುಳ್ಯ LIC ಉಪಗೃಹ ಶಾಖೆಯ ಶಾಖಾಧಿಕಾರಿ ಗುರುದತ್ ನಾಯಕ್ ಕೆ, ಪುತ್ತೂರು ಉಪಗ್ರಹ ಶಾಖೆಯ ಉಪಶಾಖಾಧಿಕಾರಿ ಗುರುರಾಜ್, LIC ಅಭಿವೃದ್ಧಿ
ಅಧಿಕಾರಿ ಗಣೇಶ್ ಹೆಗ್ಡೆ, ರೀಕೋ ಸೊಸೈಟಿಯ ಉಪಾಧ್ಯಕ್ಷ ಉಮೇಶ ಜಿ ಐವರ್ನಾಡು, ಸೂಂತೋಡು ಎಂಪೋರಿಯಂನ ಮಾಲಕರಾದ ಸೂರಯ್ಯ ಸೂಂತೂಡು, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಸ್ಥೆಯ ಮಾಲಕರಾದ ಕೆ.ಶಂಕರಲಿಂಗಂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುತ್ತುಕುಮಾರಿ ವಂದಿಸಿದರು. ಸೋಮನಾಥ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.
ದೊರೆಯುವ ಸೇವೆಗಳು:
ಮುತ್ತುಶ್ರೀ ಎಂಟರ್ಪ್ರೈಸಸ್ನಲ್ಲಿ
ಅಧಿಕೃತ LIC ಪ್ರೀಮಿಯಂ ಸ್ವೀಕೃತಿ ಕೇಂದ್ರ, ಜೀವ ವಿಮಾ ಪಾಲಿಸಿದಾರರ ಸೇವಾ ಕೇಂದ್ರ, ವಾಹನ ವಿಮಾ ಪಾಲಿಸಿ, ಆರೋಗ್ಯ ವಿಮಾ ಪಾಲಿಸಿ ಕೇಂದ್ರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (K.S.R.T.C) ಟಿಕೆಟ್ ಬುಕಿಂಗ್ ಕೇಂದ್ರ, ಟ್ರೈನ್ ಮತ್ತು ಫ್ಲೈಟ್ ಬುಕ್ಕಿಂಗ್ ಕೇಂದ್ರ, ಹಣ ವರ್ಗಾವಣೆ, ಎಲ್ಐಸಿಯ ಪ್ರೀಮಿಯಂ ಪಾಯಿಂಟ್ ಆಗಿ ಕಾರ್ಯ ನಿರ್ವಹಿಸಲಿದೆ.
ಎಲ್ಲಾ ತರಹದ LIC ಪಾಲಿಸಿಗಳ ಸೇವೆ
ವಾಹನ ವಿಮೆ -ನ್ಯಾಶನಲ್ ಇನ್ಸೂರೆನ್ಸ್ ಕಂಪೆನಿ ಲಿ.
ಆರೋಗ್ಯ ವಿಮೆ-ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಂಪೆನಿ ಲಿ.
KSRTC ಅವತಾರ್ ಟಿಕೆಟ್ ಬುಕ್ಕಿಂಗ್ ಕೇಂದ್ರ.
ಟ್ರೈನ್ ಮತ್ತು ಫ್ಲೈಟ್ ಟಿಕೆಟ್ ಬುಕ್ಕಿಂಗ್ ಕೇಂದ್ರ.
ಮನಿ ಟ್ರಾನ್ಸ್ಫರ್: ಗೂಗಲ್ ಪೇ, ಫೋನ್ ಪೇ, ರೂಪೇ, ನೆಟ್ ಬ್ಯಾಂಕಿಂಗ್, UPI ಸೇವೆಗಳು.
ಜೆರಾಕ್ಸ್ ಲ್ಯಾಮಿನೇಶನ್, ಸ್ಪೈರಲ್ ಬೈಂಡಿಂಗ್ ಇತ್ಯಾದಿ ಸೇವೆ ಲಭ್ಯವಿದೆ
ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ಇದೆ ಎಂದು ಶಂಕರಲಿಂಗಂ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶಂಕರ್ಲಿಂಗಂ. ಕೆ. ತೊಡಿಕಾನ 7th Time MDRT 2024 CM Club ‘Member’ LIC OF INDIA.
ಮುತ್ತುಶ್ರೀ ಎಂಟರ್ಪ್ರೈಸಸ್’
ಸೂಂತೋಡು ಎಂಪೋರಿಯಂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ
ಸುಳ್ಯ ದ.ಕ.
ಮೊಬೈಲ್:
9449209225
9740208500