ಮುಂಬೈ: ಇಂದು ಅಕ್ಷರಷಃ ಮ್ಯಾಕ್ಸಿ ಮ್ಯಾಜಿಕ್ಗೆ ಮುಂಬೈವಾಂಖೆಡೆ ಸ್ಟೇಡಿಯಂ ಸಾಕ್ಷಿಯಾಯಿತು. ಕೇವಲ 91 ರನ್ಗೆ 7 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿದ್ದ ಆಸ್ಟ್ರೇಲಿಯಾ ತಂಡಕ್ಕೆ ಏಕಾಂಗಿ ಹೋರಾಟ ನಡೆಸಿ ಕೆಚ್ಚೆದೆಯ ದ್ವಿಶತಕ ದಾಖಲಿಸಿ ರೋಚಕ ಜಯ ತಂದು ಕೊಟ್ಟರು. ಗಾಯಗೊಂಡರೂ, ಬಸವಳಿದರೂ ಎದೆಗುಂದದ ಮ್ಯಾಕ್ಸ್ವೆಲ್ ಈ ವಿಶ್ವಕಪ್ನ ಅದ್ಭುತ ಆಟದ ಮೂಲಕ ತಂಡಕ್ಕೆ 3 ವಿಕಟ್ಗಳ ಸ್ಮರಣೀಯ ಗೆಲುವು ತಂದು ಕೊಟ್ಟರು. ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ 292 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ

ಸುಳಿಗೆ ಸಿಲುಕಿತ್ತು. ತಂಡವನ್ನು ಏಕಾಂಗಿಯಾಗಿ ಮುನ್ನಡೆಸಿದ ಗ್ಲೆನ್ ಮ್ಯಾಕ್ಸ್ವೆಲ್ 128 ಎಸೆತಗಳಲ್ಲಿ 21 ಬೌಂಡರಿ ಹಾಗೂ 10. ಸಿಕ್ಸರ್ ನೆರವಿನಿಂದ ಅಜೇಯ ದ್ವಿಶತಕ ಬಾರಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಆಸ್ಟ್ರೇಲಿಯಾ 46.5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ50 ಓವರ್ಗಳಲ್ಲಿ ಅಫ್ಘಾನಿಸ್ತಾನ್ ತಂಡದ ಮೊತ್ತ 5 ವಿಕೆಟ್ ನಷ್ಟಕ್ಕೆ 291ರನ್ ಗಳಿಸಿತು. ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ರನ್ನು ಶೂನ್ಯಕ್ಕೆ, ಮಿಚೆಲ್ ಮಾರ್ಷ್ 24, ಡೇವಿಡ್ ವಾರ್ನರ್ 18 ರನ್, ಜೋಶ್ ಇಂಗ್ಲಿಸ್ (0) ಮಾರ್ನಸ್ ಲಾಬುಶೇನ್ 14,ವಮಾರ್ಕಸ್ ಸ್ಟೋಯಿನಿಸ್ 6 ಹಾಗೂ ಮಿಚೆಲ್ ಮಾರ್ಷ್ 3 ಬೇಗನೇ ನಿರ್ಗಮಿಸಿದರು. ನಿರಂತರ ವಿಕೆಟ್ ಉರುಳಿದರೂ ಗ್ಲೆನ್ ಮ್ಯಾಕ್ಸ್ವೆಲ್ ಕ್ರೀಸ್ ಕಚ್ಚಿ ನಿಂತಿದ್ದರು. ಅಫ್ಘಾನ್ ಬೌಲರ್ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಮ್ಯಾಕ್ಸ್ವೆಲ್ 51 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಅರ್ಧಶತಕದ ಬಳಿಕ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು.76 ಎಸೆತಗಳಲ್ಲಿ ಶತಕ ಪೂರೈಸಿದರಿ. ಮ್ಯಾಕ್ಸ್ ಅಷ್ಟೇ ಅಲ್ಲದೆ ಪ್ಯಾಟ್ ಕಮಿನ್ಸ್ ಜೊತೆಗೂಡಿ 8ನೇ ವಿಕೆಟ್ಗೆ 202 ರನ್ಗಳ ಜೊತೆಯಾಟ ಆಡಿದರು. ಇದರಲ್ಲಿ ನೆಲ ಕಚ್ಚಿ ಆಡಿದ ಕಮಿನ್ಸ್ ಸ್ಕೋರ್ 68 ಎಸೆತಗಳಲ್ಲಿ 12 ರನ್ ಮಾತ್ರ.ಇದರ ನಡುವೆ ಬೆನ್ನು ನೋವಿಗೆ ಒಳಗಾದರೂ ಮ್ಯಾಕ್ಸಿ ನೋವಿನೊಂದಿಗೆ ಕೆಚ್ಚೆದೆಯ ಹೋರಾಟವನ್ನು ಮುಂದುವರೆಸಿದರು.ಒಂದು ಹಂತದಲ್ಲಿ
ನೋವಿನ ಕಾರಣ ರನ್ ಓಡುವುದನ್ನೂ ನಿಲ್ಲಿಸಿದ ಮ್ಯಾಕ್ಸ್ವೆಲ್ ಸಿಕ್ಸ್-ಫೋರ್ಗಳ ಮೂಲಕವೇ ರನ್ಗಳಿಸುತ್ತಾ ಸಾಗಿದರು. ಪರಿಣಾಮ ಕೊನೆಯ 5 ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು ಕೇವಲ 25 ರನ್ಗಳ ಅಗತ್ಯವಿತ್ತು.ಈ ವೇಳೆಯು ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಮ್ಯಾಕ್ಸ್ವೆಲ್ ಸಿಕ್ಸ್-ಫೋರ್ಗಳ ಮೂಲಕವೇ ರನ್ಗಳಿಸುತ್ತಾ ಸಾಗಿದರು. ಅದರಲ್ಲೂ ಮುಜೀಬ್ ಉರ್ ರೆಹಮಾನ್ ಎಸೆದ 47ನೇ ಓವರ್ನಲ್ಲಿ ಮೂರು ಸಿಕ್ಸ್ ಹಾಗೂ 1 ಫೋರ್ಗಳನ್ನು ಸಿಡಿಸುವ ಮೂಲಕ ಮ್ಯಾಕ್ಸ್ವೆಲ್ ಚೊಚ್ಚಲ ದ್ವಿಶತಕ ಪೂರೈಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 3 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.
ಅಫ್ಘಾನಿಸ್ತಾನ ಪರ ಆರಂಭಿಕ ಆಟಗಾರ ಇಬ್ರಾಹಿಂ ಝದ್ರಾನ್ ಶತಕ ಬಾರಿಸಿಸರು. ಝದ್ರಾನ್ 143 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 129 ರನ್ ಬಾರಿಸಿದರು.ರಶೀದ್ ಖಾನ್ ಸಿಕ್ಸ್-ಫೋರ್ಗಳ ಸುರಿಮಳೆಗೈದು ಕೇವಲ 18 ಎಸೆತಗಳಲ್ಲಿ ರಶೀದ್ ಖಾನ್ ಅಜೇಯ 35 ರನ್ಗಳಿಸಿದರು.









