ಮಂಞಡುಕ:ಕರಿಕೆ ಮಂಞಡುಕ ಶ್ರೀ ತುಳೂರ್ ವನತ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಸಂಭ್ರಮ. ಫೆಬ್ರವರಿ 16ರಂದು ಆರಂಭಗೊಂಡಿರುವ ಕಳಿಯಾಟ 23ರವರೆಗೆ ನಡೆಯಲಿದೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಭಕ್ತರು ಸಂಗಮಿಸುವ ಚಂದ್ರಗಿರಿ ತಟದ ಪುಣ್ಯ ಕ್ಷೇತ್ರದಲ್ಲಿ ಎಂಟು ದಿನಗಳ ಕಾಲ ಕಳಿಯಾಟ ಸಂಭ್ರಮ. ಶ್ರೀ ಭಗವತಿ ಅಮ್ಮ, ಮುನ್ನಾಯರೀಶ್ವರನ್, ಕ್ಷೇತ್ರ ಪಾಲಕನೀಶ್ವರ ಸೇರಿದಂತೆ 101 ದೈವಗಳ ಕೋಲಗಳು ಅವತರಿಸಿ ಭಕ್ತರ ಹರಸಲಿದೆ.ಮಹಾಶಿವರಾತ್ರಿ ದಿನ ಆರ್ಧರಾತ್ರಿಯ ಸಮಯದಲ್ಲಿ ಕ್ಷೇತ್ರದ
ತೆಂಕಿನ ಬಾಗಿಲು ತೆರೆದು ಫೆ.16ರಂದು ಪಾಣತ್ತೂರು ಕಾಟೂರು ಮನೆಯಿಂದ ವೀಳ್ಯ ನೀಡುವ ಕಾರ್ಯಕ್ರಮದೊಂದಿಗೆ ಆರಂಭಗೊಂಡು ದೀಪವು ಬತ್ತಿಯು ಮಂಞಡುಕ ದೇವಸ್ಥಾನ ಪ್ರವೇಶಿಸಿಸುವುದರೊಂದಿಗೆ ಉತ್ಸವ ಆರಂಭಗೊಂಡಿತು.
ಫೆ.16 ರಂದು ರಾತ್ರಿ ಆಡರುಭೂತ,ನಾಗರಾಜರೂ ನಾಗಕನ್ನಿಕೆಯೂ ಬೆಳಗ್ಗೆ ದೇವರಾಜರೂ, ದೇವಕನ್ನಿಕೆಯೂ ನಡೆಯಿತು.
2 ನೇ ಕಳಿಯಾಟ ಫೆ.17ರಂದು
ಸಂಜೆ ಬೇಡ ಮತ್ತು ಕರಿಬೇಡ ದೈವಗಳು. 3ನೇ ಕಳಿಯಾಟ ಫೆ.18ರಂದು ಸಂಜೆ ಇರುದೈವಗಳು ಮತ್ತು ಪುರಾಟು, ಶ್ರೀ ಮಾಂಞಾಲಮ್ಮ ದೇವಿಯೂ, ಊರಜನರ ಕಲಶವು, ಒಳಿಮಗಳು ಕಿಳಿಮಗಳು ಕಲಶ ಮತ್ತು ಮಾಂಚೇರಿ ಮುತಪ್ಪ ದೈವ. 4ನೇ ಕಳಿಯಾಟ ಫೆ.19 ರಂದು ಹಗಲು 1 ಗಂಟೆಗೆ ಹೂವಿನವರು ಪಾಣತ್ತೂರು ಕಾಟೂರು ಮನೆಗೆ ತಲುಪುವುದು ಅಲ್ಲಿ ಎದುರುಗೊಳ್ಳುವಿಕೆ, ಸಂಜೆ ಹೂವಿನವರು ಮಂಞಡುಕ ತಲುಪುವುದು ಸಂಜೆ 6 ಗಂಟೆಗೆ ಶ್ರೀ ಮುನ್ನಾಯರು ದೇವರ ವೆಳ್ಳಾಟ, ರಾತ್ರಿ ಕರಿಂದ್ರಾಯರು, ಹುಲಿಮಾರನ್ ವೇಟೆಕ್ಕೊರುಮಗನ್ ದೈವಗಳ ವೆಳ್ಳಾಟ. 5ನೇ ಕಳಿಯಾಟ ಫೆ.20 ರಂದು ಬೆಳಗ್ಗೆ ಶ್ರೀ ಮುನ್ನಾಯರೀಶ್ವರನ ಕೋಲ, ಹಗಲು ಕರಿಂದ್ರಾಯರು, ಹುಲಿಮಾರನ್, ವೇಟೆಕ್ಕೊರುಮಗನ್ ದೈವಗಳ ಕೋಲಗಳು ಸಂಜೆ ಶ್ರೀ ಮುನ್ನಾಯರು ದೇವರ ವೆಳ್ಳಾಟ, ಶ್ರೀ ಕಾಳಪುಲಿಯನ್, ಶ್ರೀ ಪುಲಿಕಂಡನ್,ಶ್ರೀ ವೇಟೆಕ್ಕೊರುಮಗನ್ ದೈವಗಳ ವೆಳ್ಳಾಟ ಮತ್ತು ಶ್ರೀ ಪೈಟ್ಟಡಿ ಪೂವನ್ ದೈವ.

6 ನೇ ಕಳಿಯಾಟ ಫೆ.21ರಂದು ಶನಿವಾರ ಬೆಳಗ್ಗೆ ಶ್ರೀ ಮುನ್ನಾಯರೀಶ್ವರನ ಕೋಲ, ನಂತರ ಶ್ರೀ ಕಾಳಪುಲಿಯನ್, ಶ್ರೀ ವೇಟೆಕ್ಕೂರುಮಗನ್ ದೈವಗಳು ಸಂಜೆ 7 ಗಂಟೆಗೆ ಶ್ರೀ ಮುನ್ನಾಯರು ದೇವರ ವೆಳ್ಳಾಟ, ರಾತ್ರಿ ಮಲಂಕಾರಿ ವೆಳ್ಳಾಟ, ಪುಲ್ಲೂರ್ಣನ್ ವೆಳ್ಳಾಟ ನಂತರ ಶ್ರೀ ಪಲ್ಲೂರಾಳಿ ದೇವಿ, ಶ್ರೀ ಬಾಳೋಳನ್ ದೈವಗಳ ತೋಟ್ಟಗಳು.ವೇಟೆ ಚೀಗೋನುಂ ಮತ್ತು ಪುರಾಟುಂ ಮೂತ್ತೇಡತ್, ಇಳೇಡತ್ತ್ ಕಲಶ ಮತ್ತು ಬ್ರಾಹ್ಮಣನ ಹೊರಡುವಿಕೆ
ಬೆಳಗೆ ಬಾಳೋಳನ್ ದೈವದ ಹೊರಡುವಿಕೆ. 7ನೇ ಕಳಿಯಾಟ ಫೆ.22ರಂದು ಬೆಳಿಗ್ಗೆ 10.30ಕ್ಕೆ ಶ್ರೀ ಮುನ್ನಾಯರೀಶ್ವರ ದೇವರು ಹೊರಡುವುದು.ಸಂಜೆ 4ಕ್ಕೆ ಶ್ರೀ ಮುನ್ನಾಯರೀಶ್ವರ ದೇವರ ಮುಡಿ ತೆಗೆಯುವುದು.
ನಂತರ ಮಲಂಕಾರಿ ದೈವ, ಪುಲ್ಲೂರ್ಣನ್ ದೈವ ಮತ್ತು ಪುಲ್ಲೂರಾಳಿ ದೇವಿ, ರಾತ್ರಿ ಆರ್ತಾಂಡನ್ ದೈವ ತೋಟ್ಟಂ, ಕ್ಷೇತ್ರ ಪಾಲಕನೀಶ್ವರ ದೈವಗಳ ತೋಟ್ಟಂ,ಶ್ರೀ ತುಳೂರ್ ವನತ್ ಭಗವತಿ ಅಮ್ಮನ ತೋಟ್ಟಂಗಳು, 101 ಭೂತಗಳ ಸೇವೆಯ ನಂತರ ಆರ್ತಾಂಡನ್ ದೈವ ಮತ್ತು ಕೋಳಿಚಾಲ್ ವೀರನ್ಮಾರ್. 8ನೇ ಕಳಿಯಾಟ ಫೆ.23ರಂದು ಶ್ರೀ ತುಳೂರ್ ವನತ್ತ ಭಗವತಿ ಅಮ್ಮನ ಮತ್ತು ಶ್ರೀ ಕ್ಷೇತ್ರಪಾಲಕನೀಶ್ವರನು ಮತ್ತು ಬಿಲ್ಲವಸ್ಥಾನಿಗಳ ಕಲಶ
ಸಂಜೆ 3.30 ಕ್ಕೆ ಮುಡಿ ಅವರೋಹಣ. ಫೆ.24 ರಂದು
ಕಲಶಾಟ್ ನಡೆಯಲಿದೆ.

ಸುಳ್ಯಕ್ಕೆ ಅವಿನಾಭಾವ ಸಂಬಂಧ: ಮಂಞನಡುಕ್ಕ ಶ್ರೀ ತುಳೂರ್ವನತ್ ಭಗವತಿ ಕ್ಷೇತ್ರಕ್ಕೆ ಕೇರಳ, ಕರ್ನಾಟಕ ರಾಜ್ಯಗಳ ಭಕ್ತರು ಆಗಮಿಸುತ್ತಾರೆ. ಕಳಿಯಾಟ ಮಹೋತ್ಸವ ಸಂದರ್ಭದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಸಾವಿರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸುತ್ತಾರೆ.ಫೆ.21ರಿಂದ 23ರ ತನಕ 6,7,8 ನೇ ಕಳಿಯಾಟ ದಿನದಂದು ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಮಂಞಡುಕ್ಕ ಕ್ಷೇತ್ರಕ್ಕೂ ಸುಳ್ಯಕ್ಕೂ ಅವಿನಾಭಾವ ಸಂಬಂಧ ಇದೆ. ಮಂಞನಡುಕ್ಕದ ಪ್ರಧಾನ ದೈವ ಶ್ರೀ ಮುನ್ನಾಯರೀಶ್ವರ ಹಾಗೂ ಸುಳ್ಯ ಉಬರಡ್ಕದ ಮಿತ್ತೂರು ನಾಯರ್ ಸಹೋದರರು ಎಂಬ ಪ್ರತೀತಿ ಇದೆ. ಕೇರಳದಿಂದ ಆಗಮಿಸಿದ ಈ ಸಹೋದರರ ಪೈಕಿ ಮುನ್ನಾಯರೀಶ್ವರ ತುಳೂರ್ವನದಲ್ಲಿ ನೆಲೆಯಾದರೆ, ಮಿತ್ತೂರು ನಾಯರ್ ಸುಳ್ಯ ಉಬರಡ್ಕಕ್ಕೆ ಬಂದರು. ಕಾಲಾಂತರದಲ್ಲಿ ತಮ್ಮ ಕಾರ್ನಿಕ ಶಕ್ತಿಯಿಂದ ಈ ಸಹೋದರರು ಭಕ್ತರ ಇಷ್ಟಾರ್ಥ ಸಿದ್ದಿಸುವ ದೈವಗಳಾದರು ಎಂಬ ಐತಿಹ್ಯ ಇದೆ.





