ಸುಳ್ಯ:ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಾಲಡ್ಕ ಎಂಬಲ್ಲಿ ಅಶಕ್ತ ಮಹಿಳೆಯ ಮನೆಯು ಸಂಪೂರ್ಣವಾಗಿ ಗೋಡೆಗಳು ಬಿರುಕುಬಿಟ್ಟು ಜೀವ ಭಯದಲ್ಲಿ ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣ ಆಗಿದೆ.
ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳ್ಯ ನಗರಕ್ಕೆ ತಾಕಿಕೊಂಡಿರುವ ಅರಂಬೂರು ಎಂಬಲ್ಲಿ ಮೀನಾಕ್ಷಿ ಎಂಬ ವೃದ್ದೆಯ ಮನೆಯು ಸಂಪೂರ್ಣವಾಗಿ ಹಾನಿಯಾಗಿದ್ದು ಪಂಚಾಯತ್ ಹಾಗೂ
ಆಡಳಿತಕ್ಕೆ ಮನವಿ ನೀಡಿದರೂ ಯಾವುದೇ ಪರಿಹಾರ ಆಗಿಲ್ಲ.ಹಾಸಿಗೆ ಹಿಡಿದಿರುವ ಮಗಳ ಜೊತೆಗೆ ವಾಸಿಸುತ್ತಿರುವ ವೃದ್ದೆ ಮೀನಾಕ್ಷಿ ತಮ್ಮ ಅಳಲನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರು ವೃದ್ದೆಗೆ ನೆರವಾಗುವ ಕೆಲಸ ನಡೆದಿಲ್ಲ
ಇದೀಗ ಸಮಸ್ಯೆಗಳನ್ನು ಅರಿತು ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಕೆ.ಗೋಕುಲ್ದಾಸ್ ಅವರು ಕೆಲದಿನಗಳ ವರೆಗೆ ಅವರ ಮನೆಯಲ್ಲಿ ವಾಸಿಸಲು ಅವಕಾಶ ನೀಡಿ ಇವರಿಗೆ ಸರಕಾರದಿಂದ ಸಿಗುವ ಗೃಹಲಕ್ಷ್ಮಿ ಹಾಗೂ ಪಡಿತರ ಅಕ್ಕಿಯಲ್ಲಿ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಸುಳ್ಯ ತಾಲೂಕಿನಾಧ್ಯಂತ ವಿಪರೀತ ಗಾಳಿ ಮಳೆಯಾಗುತ್ತಿದ್ದು ಮನೆಯ ಗೋಡೆ ಸಂಪೂರ್ಣ ಬಿರುಕುಬಿಟ್ಟಿದ್ದು ಕೆಲ ಕ್ಷಣಗಳಲ್ಲೆ ಉರುಳಿ ಬೀಳುವ ಅಪಾಯವು ಎದುರಾಗಿದೆ. ಇವೆಲ್ಲದರ ಮಧ್ಯೆ ಸ್ಥಳೀಯರ ಮೂಲಕ ಟಾರ್ಪಲ್ ಹೊದಿಕೆ ಎರಡು ವರ್ಷಗಳ ಹಿಂದೆ ಅಳವಡಿಕೆ ಮಾಡಲಾಗಿತ್ತು ಆದರೆ ಇದೀಗ ಈ ಟಾರ್ಪಲ್ ಹೊದಿಕೆ ಹರಿದು ಶಿಥಿಲವಾಗಿದ್ದು ಈ ಮಳೆಗೆ ಮನೆ ಸಂಪೂರ್ಣ ಧರೆಶಾಹಿಯಾಗುವ ಸ್ಥಿತಿ ನಿರ್ಮಾಣ ಆಗಿದೆ.
ಮೀನಾಕ್ಷಿಯವರ ಮಗಳು ವೀಲ್ ಚಯರ್ನಲ್ಲಿ ಕುಳಿತು ಓಡಾಡುತ್ತಿದ್ದಾರೆ.
ಅಶಕ್ತ ಕುಟುಂಬಕ್ಕೆ ಸರಕಾರ ಮತ್ತು ಆಡಳಿತ ತಕ್ಷಣವೇ ನೆರವಾಗಬೇಕು ಎಂದು ಕೆ ಗೋಕುಲ್ದಾಸ್ ಅವರು ಒತ್ತಾಯಿಸಿದ್ದಾರೆ.
ವರದಿ:ಮಿಥುನ್ ಕರ್ಲಪ್ಪಾಡಿ





