ಸುಳ್ಯ: ಬೇಸಿಗೆ ರಜೆ ಮುಗಿದು ಶಾಲೆಗಳು ಮೇ 29 ರಿಂದ ಪುನರಾರಂಭವಾಗಿದೆ. ಇಂದು ಶಾಲೆಗಳು ಆರಂಭಗೊಂಡರೂ ಮಕ್ಕಳು ಬರಲಿಲ್ಲ. ಮೇ.30ರಂದು ಮಕ್ಕಳು ಶಾಲೆಗೆ ಬರಲಿದ್ದು ನಾಳೆ ಶಾಲೆಗಳಲ್ಲಿ ಪ್ರಾರಂಭೋತ್ಸವ ನಡೆಯಲಿದೆ. ಇಂದು ಶಿಕ್ಷಕರು, ಮುಖ್ಯಶಿಕ್ಷಕರು ಮತ್ತು ಇತರೆ ಸಿಬ್ಬಂದಿಗಳು ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಜರಾಗಿ
ಪ್ರಾರಂಭೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತಿದೆ.ಶಾಲಾ ಆವರಣ, ತರಗತಿ ಕೊಠಡಿಗಳನ್ನು ಸ್ವಚ್ಛಗೊಳಿಸಿ, ತಳಿರು ತೋರಣ, ರಂಗೋಲಿ ಬಿಡಿಸಿ ಶಾಲೆಗಳನ್ನು ಅಲಂಕರಿಸಲಾಗುತಿದೆ. ಮೇ 30ರಂದು ಮಕ್ಕಳನ್ನು ಸ್ವಾಗತಿಸಲು ಎಲ್ಲ ಶಾಲೆಗಳು ಸಜ್ಜುಗೊಳ್ಳುತಿದೆ. ಶಾಲಾ ಪ್ರಾರಂಭೋತ್ಸವ ದಿನ ಮಕ್ಕಳನ್ನು ಸ್ವಾಗತಿಸಿ, ಸಿಹಿ ನೀಡಿ ಬರ ಮಾಡಿಕೊಳ್ಳಲಾಗುವುದು. ಶಾಲಾ ಶಿಕ್ಚಕರು, ಜನಪ್ರತಿನಿಧಿಗಳು, ಶಾಲಾ ಎಸ್ಡಿಎಂಸಿ ಪದಾಧಿಕಾರಿಗಳು ಮತ್ತಿತರರು ಸೇರಿ ಪ್ರಾರಂಭೋತ್ಸವ ನಡೆಯಲಿದೆ.
ಸುಳ್ಯ ತಾಲೂಕು ಮಟ್ಟದ ಪ್ರಾರಂಭೊತ್ಸವ ಗುತ್ತಿಗಾರು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ ಎಂದು ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ತಿಳಿಸಿದ್ದಾರೆ. ತಾಲೂಕಿನ ಸುಳ್ಯ ತಾಲೂಕಿನ 136 ಪ್ರಾಥಮಿಕ ಶಾಲೆಗಳು, 14 ಸರಕಾರಿ ಪ್ರೌಢ ಶಾಲೆಗಳು ಸೇರಿದಂತೆ, ಸರಕಾರಿ, ಅನುದಾನಿತ, ಹಾಗೂ ಅನುದಾನ ರಹೀತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಆರಂಭಗೊಂಡಿದ್ದು ನಾಳೆಯ ಪ್ರಾರಂಭೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.