ಸುಳ್ಯ: ಸುಳ್ಯದ 110 ಕೆವಿ ವಿದ್ಯುತ್ ಲೈನ್ನ ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ಗೆ ಮನವಿ ಸಲ್ಲಿಸಲಾಯಿತು. ಬೆಂಗಳೂರಿನಲ್ಲಿ ಭೇಟಿಯಾಗಿ ಕೆಪಿಸಿಸಿ ಮಾಧ್ಯಮ ವಕ್ತಾರ ಟಿ. ಎಂ. ಶಹೀದ್ ತೆಕ್ಕಿಲ್ ,ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ.ಮುಸ್ತಫ,ಸುಳ್ಯ ನಗರ ಪಂಚಾಯತ್ ಸದಸ್ಯ
ರಿಯಾಜ್ ಕಟ್ಟೆಕ್ಕಾರ್,ಕಾಂಗ್ರೆಸ್ ಧುರೀಣ ಮೂಸ ಪೈಂಬಚಾಲ್ ಮನವಿ ಸಲ್ಲಿಸಿದರು.ಸುಳ್ಯದಲ್ಲಿ ಹಲವು ದಶಕಗಳಿಂದ ವಿದ್ಯುತ್ ಸಮಸ್ಯೆಯಿದೆ. ಕೈಗಾರಿಕೆಗಳಿಗೆ, ಕುಡಿಯುವ ನೀರು ಸರಬರಾಜಿಗೆ ವಿದ್ಯುತ್ ಸಮಸ್ಯೆ ಇದಡ. ವಿದ್ಯುತ್ ಸಮಸ್ಯೆಯಿಂದ ಸುಳ್ಯ ಅಭಿವೃದ್ಧಿ ಕುಂಠಿತವಾಗಿದ್ದು, 110 ಕೆವಿ ವಿದ್ಯುತ್ ಲೈನಿನ ಕಾಮಗಾರಿ ಹಲವು ಅಡೆ ತಡೆಗಳಿಂದ, ರಾಜಕೀಯ ಮೇಲಾಟದಿಂದ ನೆನೆಗುದಿಗೆ ಬಿದ್ದಿರುತ್ತದೆ, ಆದ್ದರಿಂದ ತಕ್ಷಣ ಕಾಮಗಾರಿ ಪೂರ್ತಿಗೊಳಿ ಸುವಂತೆ ಮನವಿಯಲ್ಲಿ ವಿನಂತಿಸಲಾಯಿತು.