ಕೋಝಿಕೋಡ್: ಪೋಷಕ ನಟನಾಗಿ, ಹಾಸ್ಯ ನಟನಾಗಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಸಿನಿಮಾ ಪ್ರೇಮಿಗಳ ಮನದಲ್ಲಿ ಚಿರಸ್ಥಾಯಿಯಾದ ಮಲಯಾಳಂ ಚಿತ್ರರಂಗದ ಹಿರಿಯ ನಟ ಮಾಮುಕೋಯ(76) ನಿಧನರಾಗಿದ್ದಾರೆ. ಹೃದಯಾಘಾತದಿಂದ ಕೋಝಿಕೋಡ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ
ಮಾಮುಕೋಯ ಬುಧವಾರ ನಿಧನರಾದರು. ಸೋಮವಾರ ಮಲಪ್ಪುರಂನಲ್ಲಿ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನೆಯ ಸಂದರ್ಭ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನುಕೋಝಿಕೋಡ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಹಲವು ನಾಟಕಗಳಲ್ಲಿ ಪಾತ್ರಗಳನ್ನು ಮಾಡಿದ್ದ ಅವರು 1979ರಲ್ಲಿ ಅನ್ಯರುಡೆ ಭೂಮಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ದೂರೆ ದೂರೆ ಕೂಡು ಕೂಟಾಂ, ಗಾಂಧಿನಗರ್ ಸೆಕೆಂಡ್ ಸ್ಟ್ರೀಟ್, ಸನ್ಮಸ್ಸುಳ್ಳವರ್ಕ್ ಸಮಾಧಾನಂ, ನಾಡೋಡಿಕಾಟ್, ವರವೇಲ್ಪ್, ಮಯವಿಲ್ಕಾವಡಿ, ಪೆರುಮಯಕ್ಕಾಲಂ, ಚಂದ್ರಲೇಖ, ಹೀಸ್ ಹೈನಸ್ ಅಬ್ದುಳ್ಲಾ ಸೇರಿ 450 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೋರಪ್ಪನ್ ದಿ ಗ್ರೇಟ್ ಸಿನಿಮಾದಲ್ಲಿ ನಾಯಕ ನಟನ ಪಾತ್ರ ನಿರ್ವಹಿಸಿದ್ದರು. ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿತ್ತು. ಜನ ಸಾಮಾನ್ಯರ ಭಾಷಾ ಶೈಲಿ ಮುಟ್ಟುವ ಅಭಿನಯ ಹಾಗು ಹಾಸ್ಯ ಶೈಲಿಯ ಮೂಲಕ ಮಲಯಾಳಂ ಸಿನಿಮಾದ ಅವಿಭಾಜ್ಯ ಅಂಗವಾಗಿದ್ದರು.