ಸುಳ್ಯ:ಮಲ್ನಾಡು ಜಂಟಿ ಕ್ರಿಯಾ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಪ್ಲಾಟಿಂಗ್ (ಪೋಡಿ) ಬಾಕಿ, ಅರಣ್ಯದಂಚಿನ ನಿವಾಸಿಗಳ ಹಕ್ಕುಪತ್ರ ಮತ್ತಿತರ ಸಮಸ್ಯೆ, ಕೊವಿ ನವೀಕರಣ ಸಮಸ್ಯೆಗಳ ಕುರಿತ ಸಮಾಲೋಚನಾ ಸಭೆ ಎಪಿಎಂಸಿ ಸಭಾಂಗಣದಲ್ಲಿ ನ.23ರಂದು ನಡೆಯಿತು.
ಸಭೆಯಲ್ಲಿ ಸುಳ್ಯ ತಾಲೂಕಿನ ವಿವಿಧ ಗ್ರಾಮಗಳ ಅರ್ಜಿದಾರರು ಭಾಗವಹಿಸಿ ಪ್ಲಾಟಿಂಗ್ ಬಾಕಿ, ಕೋವಿ ನವೀಕರಣ ಹಾಗೂ ಸಂಬಂಧಿಸಿದ
ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.ಪ್ಲಾಟಿಂಗ್ ಬಾಕಿ 18 ಅರ್ಜಿ, ಕೋವಿ ನವೀಕರಣ 4. ಅರ್ಜಿಗಳು ಸೇರಿ ಹಲವು ಮಂದಿ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿದರು. ಈ ಕುರಿತು ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಅರ್ಜಿದಾರರು ಕಳೆದ 10-15 ವರ್ಷಗಳಿಂದ ಸರಿಯಾದ ದಾಖಲೆಗಳು ಇದ್ದರೂ ಪ್ಲಾಟಿಂಗ್ ಬಾಕಿ ಬಗ್ಗೆ ಇಲಾಖಾ ಸಮಸ್ಯೆಗಳ ಅನುಭವ ವಿವರಿಸಿದರು.ಮಲೆನಾಡು ಜಂಟಿ ಕ್ರಿಯಾ ಸಮಿತಿ ಸಂಚಾಲಕ ಪ್ರದೀಪ್ ಕುಮಾರ್ ಕೆಎಲ್, ಕಾನೂನಾತ್ಮಕ ಸಲಹೆ ಹಾಗೂ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಪ್ರತಿ ಎರಡು ವಾರಕ್ಕೊಮ್ಮೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸರ್ವ ಅರ್ಜಿದಾರರು ಸಂಬಂಧಿಸಿದ ಇಲಾಖೆಯಲ್ಲಿ ವಿಮರ್ಶೆ ಪ್ರಕ್ರಿಯೆ ನಡೆಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಯಿತು. ಹೆಚ್ಚುವರಿ ಅರ್ಜಿದಾರರು ಸಮಿತಿಯನ್ನು ಸಂಪರ್ಕಿಸಿ ಮುಂದಿನ ಸಭೆಯಲ್ಲಿ ಭಾಗವಹಿಸುವವರನ್ನು ಸೇರಿಸಿಕೊಂಡು ನಿರಂತರ ಕಾನೂತ್ಮಾಕ ಕ್ರಮದ ಬಗ್ಗೆ ಅಭಿಪ್ರಾಯ ರೂಪಿಸಲಾಯಿತು.
ಈ ಸಂದರ್ಭದಲ್ಲಿ ಮಲ್ನಾಡು ಜಂಟಿ ಕ್ರಿಯಾ ಸಮಿತಿ ಪ್ರವರ್ತಕ ಅಶೋಕ ಎಡಮಲೆ ಉಪಸ್ಥಿತರಿದ್ದರು. ಸಭೆಯಲ್ಲಿ ನಾರಾಯಣ ಅಜ್ಜಾವರ, ಆನಂದ ಅಮರ ಪಡ್ನೂರು, ಕುಶಾಲಪ್ಪ ನಾಲ್ಕೂರು, ಮಾಧವ ಅಮರಪಡ್ನೂರು, ರತ್ನಾಕರ ಅಜ್ಜಾವರ, ನಿತಿನ್ ನಡಗಲ್ಲು, ಧರ್ಮಪಾಲ ಗುತ್ತಿಗಾರು ಉಪಸ್ಥಿತರಿದ್ದರು.ಶೃತಿ ಕೋನಡ್ಕಪದವು ಕಾರ್ಯಕ್ರಮ ನಿರೂಪಿಸಿದರು.







