ಪಂಜ: ಬಿರು ಬೇಸಿಗೆ ಹಾಗೂ ಏರಿದ ಉಷ್ಣಾಂಶದಿಂರ ಬೆಂದು ಬರಡಾಗಿರುವ ಭುವಿಗೆ ವರುಣ ಕೃಪೆ ತೋರಬೇಕು ಎಂದು
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನಡೆಯಿತು. ದೇವಳದ ಪ್ರತಿಷ್ಠಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಳೆಗಾಗಿ
ವಿಶೇಷ ಪೂಜೆ ಸಲ್ಲಿಸಲಾಯಿತು.ಬ್ರಹ್ಮಶ್ರೀ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶೀಘ್ರ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಆ ಪ್ರಯುಕ್ತ 12 ಕಾಯಿ ಗಣಹವನ,ಆಶ್ಲೇಷ ಬಲಿ, ರುದ್ರ ಪಾರಾಯಣ, ಶತ ರುದ್ರಾಭಿಷೇಕ ,ಸೀಯಾಳ ಅಭಿಷೇಕ, ಕಲಶಾಭಿಷೇಕ ಸೇವೆ ಗಳೊಂದಿಗೆ ಶೀಘ್ರ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಮಧ್ಯಾಹ್ನ ಮಹಾಪೂಜೆ ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಂಬಾಡಿ , ಸಂತೋಷ್ ರೈ ಬಳ್ಪ, ಧರ್ಮಣ್ಣ ನಾಯ್ಕ ಗರಡಿ, ರಾಮಚಂದ್ರ ಭಟ್,ಧರ್ಮಪಾಲ ಗೌಡ ಮರಕಡ ಕಾಚಿಲ,ಮಾಯಿಲಪ್ಪ ಗೌಡ ಪಟ್ಟೆ ಎಣ್ಮೂರು, ಶ್ರೀಮತಿ ಪವಿತ್ರ ಮಲ್ಲೆಟ್ಟಿ, ಶ್ರೀಮತಿ ಮಾಲಿನಿ ಕುದ್ವ , ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.