ಸುಳ್ಯ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಹಾಗೂ ಸುಳ್ಯ ನಗರದ ವತಿಯಿಂದ ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ವಿಪರೀತ ಸೆಕೆ ಹಾಗೂ ಕುಡಿಯುವ ನೀರಿನ ಅಭಾವ ತಲೆದೋರಿದ್ದು ಜನತೆ
ಸಂಕಷ್ಟದಲ್ಲಿದ್ದಾರೆ. ಆದುದರಿಂದ ಮಳೆ ಬರಲು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ಬಜರಂಗದಳ ಸಹಸಂಯೋಜಕ ಲತೀಶ್ ಗುಂಡ್ಯ, ವಿ.ಎಚ್.ಪಿ ಸುಳ್ಯ ಕಾರ್ಯದರ್ಶಿ ರಂಜಿತ್ ಕೇರ್ಪಳ,ಬಜರಂಗದಳ ಸುಳ್ಯ ಪ್ರಖಂಡ ಸಂಯೋಜಕ ಹರಿಪ್ರಸಾದ್ ಎಲಿಮಲೆ, ಬಜರಂಗದಳ ಸಹ ಸಂಯೋಜಕ ಅರವಿಂದ್ ಸುಳ್ಯ, ನಿಧಿ ಪ್ರಮುಕ್ ಸಂದೀಪ್,ನಗರ ಕಾರ್ಯದರ್ಶಿ ದೇವಿಪ್ರಸಾದ್,ಬಜರಂಗದಳ ಸುಳ್ಯ ನಗರ ಸಂಯೋಜಕ ವರ್ಷಿತ್ ಚೊಕ್ಕಾಡಿ, ಗಿರಿಧರ್,ಪ್ರಕಾಶ್ ಯಾದವು,ರೂಪೇಶ್ ಪೂಜರಿಮನೆ, ದಿಲೀಪ್ ಉಪಸ್ಥಿತರಿದ್ದರು.