ಸುಳ್ಯ: ಇಂದು ಸುರಿದ ಮಳೆ, ಗಾಳಿ, ಗುಡುಗು ಸಿಡಿಲಿಗೆ ಅಲ್ಲಲ್ಲಿ ಆವಾಂತರ ಸೃಷ್ಠಿಸಿದೆ.ಸಂಪಾಜೆ ಕಡೆಪಾಲ ಅಂಗನವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಮರ ಉರುಳಿ ಬಿತ್ತು. ಬಳಿಕ ಅದನ್ನು ತೆರವು ಮಾಡಲಾಯಿತು. ಕನಕಮಜಲಿನ ಕನಕಕಲಾ ಗ್ರಾಮದ ಬಳಿ
ಗಾಳಿ ಮಳೆಯಿಂದಾಗಿ ಮರ ಮುರಿದು ವಿದ್ಯುತ್ ಕಂಬ ಹಾಗೂ ರಸ್ತೆಗೆ ಬಿದ್ದ ಪರಿಣಾಮವಾಗಿ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಅಲ್ಲದೆ ಅಲ್ಲಲ್ಲಿ ಗಾಳಿ ಮಳೆಗೆ ಅಡಿಕೆ ಮರ, ತೆಂಗಿನ ಮರಗಳು ಧರಾಶಾಯಿಹಮಯಾಗಿದೆ. ಮರ ಬಿದ್ದು ಅಲ್ಲಲ್ಲಿ ಮರ ಬಿದ್ದು ಸಂಚಾರಕ್ಕೆ ತಡೆ ಉಂಟಾಗಿರುವ ಬಗ್ಗೆ ವರದಿಯಾಗಿದೆ.