ಬೆಂಗಳೂರು:ಇಂದು ಚಂದ್ರ ಗ್ರಹಣ.ಮಂಗಳವಾರ (ಮಾ. 3) ಮಧ್ಯಾಹ್ನ 3.20ಕ್ಕೆ ಚಂದ್ರನಿಗೆ ಗ್ರಹಣ ಹಿಡಿಯಲು ಆರಂಭವಾಗುತ್ತದೆ. ಸಂಜೆ 6.47ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ಚಂದ್ರಗ್ರಹಣದ ಅವಧಿ 3 ಗಂಟೆ 27 ನಿಮಿಷಗಳಷ್ಟು ಸುದೀರ್ಘವಾಗಿರುತ್ತದೆ. ಪೂರ್ಣ ಚಂದ್ರಗ್ರಹಣ ಸಂಜೆ 4.34ಕ್ಕೆ ಪ್ರಾರಂಭವಾಗುತ್ತದೆ. ಭಾರತದಲ್ಲೂ
ಚಂದ್ರಗ್ರಹಣ ಗೋಚರಿಸಲಿದೆ. ಭಾರತದಲ್ಲಿ ಸಂಜೆ 6.22 ಗಂಟೆಗೆ ಗ್ರಹಣ ವೀಕ್ಷಿಸಬಹುದಾಗಿದೆ. ಸಂಜೆ 6.47ಕ್ಕೆ ಕೊನೆಗೊಳ್ಳುತ್ತದೆ. ಈ ಸಮಯದ ಪ್ರಕಾರ, ಭಾರತದಲ್ಲಿ ಚಂದ್ರಗ್ರಹಣ ಕಡಿಮೆ ಸಮಯದವರೆಗೆ ಗೋಚರಿಸುತ್ತದೆ. ಅಂದರೆ ಒಟ್ಟು 25 ನಿಮಿಷಗಳಷ್ಟು ಕಾಲ ಚಂದ್ರನಿಗೆ ಗ್ರಹಣ ಹಿಡಿದಿರುವುದನ್ನು ಭಾರತೀಯರು ನೋಡಬಹುದಾಗಿದೆ. ಇದರಿಂದಾಗಿ ದೇಶದ ವಿವಿಧ ಕಡೆ ಚಂದ್ರೋದಯದ ಸಮಯದಲ್ಲಿ ಬದಲಾವಣೆಗಳು ಆಗಲಿವೆ.
ಚಂದ್ರಗ್ರಹಣ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ, ಕೇರಳ, ರಾಜಸ್ಥಾನ, ಜಮ್ಮು-ಕಾಶ್ಮೀರ, ಮಣಿಪುರ ಮತ್ತಿತರ ರಾಜ್ಯಗಳಲ್ಲಿ ಗೋಚರಿಸುತ್ತದೆ. ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯಗಳಲ್ಲಿ ಸಂಪೂರ್ಣ ಗ್ರಹಣ ವೀಕ್ಷಣೆ ಸಾಧ್ಯ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ. ಚಂದ್ರ ಗ್ರಹಣ ಕಾರಣ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಹಾಗೂ ದರ್ಶನ ಸಮಯದಲ್ಲಿ ಬದಲಾವಣೆ ಇರಲಿದೆ.









