ಹೈದರಾಬಾದ್: ಲಖನೌ ಸೂಪರ್ ಜೈಂಟ್ಸ್ ತಂಡ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 5 ವಿಕೆಟ್ಗಳ ರೋಚಕ ಜಯ ಪಡೆಯಿತು.ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ 20 ಓವರ್ಗಳಲ್ಲಿ 9 ವಿಕೆಟ್ಗೆ 156 ರನ್ ಗಳಿಸಿತು. ಲಖನೌ 19.5 ಓವರ್ಗಳಲ್ಲಿ 5 ವಿಕೆಟ್ಗೆ 160 ರನ್ ಭಾರಿಸಿ ಜಯದ ನಗು ಬೀರಿತು.ನಾಯಕ
ಋಷಬ್ ಪಂತ್ 50 ಎಸೆತಗಳಲ್ಲಿ 9 ಬೌಂಡರಿಗಳಿದ್ದ ಅಜೇಯ 68 ರನ್ ಭಾರಿಸಿ ಗೆಲುವಿನ ರುವಾರಿಯಾದರು.ಲಖನೌ ತಂಡಕ್ಕೆ ಮರ್ಕರಂ (45, 27ಎ, 4×6, 6×2) ಮತ್ತು ರಿಷಭ್ ಪಂತ್ ಎರಡನೇ ವಿಕೆಟ್ಗೆ 40 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಮರ್ಕರಂ ನಿರ್ಗಮಿಸಿದ ಮೇಲೆ ಒಂದು ಕಡೆ ನಿಯಮಿತವಾಗಿ ವಿಕೆಟ್ಗಳು ಉರುಳಿದವು. ಆದರೆ ಇನ್ನೊಂದು ಕಡೆ ಪಂತ್ ಹೊಣೆಯರಿತು ಆಟವಾಡಿದರು.
ಇದಕ್ಕೆ ಮೊದಲು ಮಹಮ್ಮದ್ ಶಮಿ ಅವರ ದಾಳಿಗೆ ಕುಸಿತ ಕಂಡ ಸನ್ರೈಸರ್ಸ್ 26 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಈ ಸಂದ್ರಭ ಬೀಸಾಟವಾಡಿದ ಹೆನ್ರಿಚ್ ಕ್ಲಾಸೆನ್ (62, 41ಎ, 4×5, 6×2) ಮತ್ತು ನಿತೀಶ್ ಕುಮಾರ್ ರೆಡ್ಡಿ (56, 33ಎ, 4×3, 6×5) ಅವರು ಅರ್ಧಶತಕಗಳನ್ನು ಬಾರಿಸಿದರಷ್ಟೇ ಅಲ್ಲ, ಐದನೇ ವಿಕೆಟ್ಗೆ 116 ರನ್ ಸೇರಿಸಿ ತಂಡಕ್ಕೆ ಬಲ ನೀಡಿದರು.
ಸಂಕ್ಷಿಪ್ತ ಸ್ಕೋರು: ಸನ್ರೈಸರ್ಸ್ ಹೈದರಾಬಾದ್: 20 ಓವರುಗಳಲ್ಲಿ 9 ವಿಕೆಟ್ಗೆ 156 (ಹೆನ್ರಿಚ್ ಕ್ಲಾಸೆನ್ 62, ನಿತೀಶ್ ಕುಮಾರ್ ರೆಡ್ಡಿ 56; ಮೊಹಮ್ಮದ್ ಶಮಿ 9ಕ್ಕೆ2, ಪ್ರಿನ್ಸ್ ಯಾದವ್ 34ಕ್ಕೆ2, ಆವೇಶ್ ಖಾನ್ 36ಕ್ಕೆ2); ಲಖನೌ ಸೂಪರ್ ಕಿಂಗ್ಸ್: 19.5 ಓವರುಗಳಲ್ಲಿ 5 ವಿಕೆಟ್ಗೆ 160 (ಏಡನ್ ಮರ್ಕರಂ 45, ರಿಷಭ್ ಪಂತ್ ಔಟಾಗದೇ 68; ಹರ್ಷ ದುಬೆ 18ಕ್ಕೆ2);









