ಲಖನೌ: ಲಖನೌ ಸೂಪರ್ ಜೈಂಟ್ಸ್ ತಂಡ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿತು.ಮಾರ್ಕಸ್ ಸ್ಟೊಯಿನಿಸ್ (19ಕ್ಕೆ 1 ಮತ್ತು 62, 45ಎ) ಅವರ ಆಲ್ರೌಂಡ್ ಆಟ ನೆರವಿನಿಂದ ಲಖನೌ ಜಯದ ದಡ ಸೇರಿತು. ಮೊದಲು ಬ್ಯಾಟ್ ಮಾಡಿದ
ಮುಂಬೈ 20 ಓವರ್ಗಳಲ್ಲಿ 7 ವಿಕೆಟ್ಗೆ 144 ರನ್ ಗಳಿಸಿತು. ಲಖನೌ ತಂಡ 19.2 ಓವರ್ಗಳಲ್ಲಿ ಆರು ವಿಕಟ್ಗೆ 145 ರನ್ ಗಳಿಸಿತು.ಲೀಗ್ ನಲ್ಲಿ ಆರನೇ ಗೆಲುವಿನೊಡನೆ ಲಖನೌ ಮೂರನೇ ಸ್ಥಾನಕ್ಕೆ ಜಿಗಿದರೆ, ಮುಂಬೈ ತಂಡ ಏಳನೇ ಸೋಲಿನೊಡನೆ ಪ್ಲೇ ಆಫ್ ಹಾದಿ ತೀವ್ರ ಹಿನ್ನಡೆ ಅನುಭವಿಸಿತು.
ನಾಯಕ ಕೆ.ಎಲ್.ರಾಹುಲ್ (28) ಮತ್ತು ಸ್ಟೊಯಿನಿಸ್ 53 ರನ್ ಜೊತೆಯಾಟದ ಮೂಲಕ ತಂಡಕ್ಕೆ ಒಳ್ಳೆಯ ಬುನಾದಿ ಒದಗಿಸಿದರು. ದೀಪಕ್ ಹೂಡಾ (18) ಮತ್ತು ನಿಕೋಲಸ್ ಪೂರನ್ (14) ತಂಡದ ಗೆಲುವಿಗೆ ಕಾಣಿಕೆ ನೀಡಿದರು.ಮುಂಬೈ ಪವರ್ ಪ್ಲೇ ಅವಧಿಯಲ್ಲಿಯೇ ನಾಲ್ಕು ವಿಕೆಟ್ ಕಳೆದುಕೊಂಡು ಇಂಡಿಯನ್ಸ್ ತಂಡವು ಸಾಧಾರಣ ಮೊತ್ತ ಗಳಿಸಿತು. ನೇಹಲ್ ವಧೇರಾ (46 ರನ್) ಮತ್ತು ಇಶಾನ್ ಕಿಶನ್ (32 ರನ್) ಟಿಮ್ ಡೇವಿಡ್ (ಔಟಾಗದೆ 35; 18ಎ, 4X3, 6X1) ಕೊಡಯಗೆ ನೀಡಿದರು.