ಸುಳ್ಯ: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಮುಂದಿರಿಸಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಾರ್ಮಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಮತ್ತು ಧರಣಿ ಸತ್ಯಾಗ್ರಹದಿಂದ ಎರಡು ಕಾರ್ಮಿಕ ಸಂಘಟನೆಗಳು ಹಿಂದೆ ಸರಿದಿದೆ.ಕರ್ನಾಟಕ ಪ್ಲಾಂಟೇಷನ್ & ಇಂಡಸ್ಟ್ರೀಯಲ್ ವರ್ಕರ್ಸ್ ಟ್ರೇಡ್ ಯೂನಿಯನ್ ಹಾಗೂ
ತೋಟ ತೊಳಿಲಾಲರ್ ಸಂಘ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ಸಂಘಟನೆಗಳ ಪದಾಧಿಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ಲಾಂಟೇಷನ್ & ಇಂಡಸ್ಟ್ರೀಯಲ್ ವರ್ಕರ್ಸ್ ಟ್ರೇಡ್ ಯೂನಿಯನ್ನ ಅಧ್ಯಕ್ಷ ಶಿವಕುಮಾರ್ ಕಂದಡ್ಕ
ಮಾತನಾಡಿ ‘ಕಾರ್ಮಿಕರು ಮುಂದಿರಿಸಿದ ಬೇಡಿಕೆಗಳನ್ನು ಈಡೇರಿಸುವುದಾಗಿ ದೊರೆತ ಭರವಸೆಯ ಮೇರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ಹೇಳಿದರು.
ಲಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅವರು ನಿಗಮದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಹಿನ್ನಲೆಯಲ್ಲಿ ನಿರಂತರ ಕಾರ್ಮಿಕರ ಬಾಕಿ ವೇತನ ಪಾವತಿಸುವುದಾಗಿ ಭರವಸೆ ದೊರೆತಿದೆ, ಅಲ್ಲದೆ ಹಂತ ಹಂತವಾಗಿ ಎಲ್ಲಾ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದ ಹಿನ್ನಲೆಯಲ್ಲಿ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎರಡು ಸಂಘಟನೆಗಳ ಪ್ರಮುಖರಾದ ಚಂದ್ರನ್ ಕೂಟೇಲು, ಶರವಣನ್, ಆನಂದ ನಾಗಪಟ್ಟಣ,ಅರುಣಾಚಲಂ
ಉಪಸ್ಥಿತರಿದ್ದರು.









