ಸುಳ್ಯ: ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಇನ್ನಿಲ್ಲದ ಖುಷಿ. ಈ ಬೇಸಿಗೆ ರಜೆಯನ್ನು ಇನ್ನಷ್ಟು ಆನಂದದಾಯಕವಾಗಿಸಿ ಬಾಲ್ಯದ ದಿನಗಳನ್ನು ಸ್ಮರಣೀಯವಾಗಿಸಲು ಸುಳ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಏರ್ಪಡಿಸುವ ಬೇಸಿಗೆ ಶಿಬಿರ ಮಕ್ಕಳನ್ನು ಕೈ ಬೀಸಿ ಕರೆಯುತಿದೆ. ಸಂಭ್ರಮದ, ಸಂತಸದ ಸಮಯ ಕಳೆಯುವುದರೊಂದಿಗೆ ಮೋಜಿನ ಕಲಿಕೆಯನ್ನು ಪಡೆಯಲು ಕೆವಿಜಿ ಐಪಿಎಸ್ 10 ದಿನಗಳ ‘ಸಮ್ಮರ್ ಕ್ಯಾಂಪ್’ ಏರ್ಪಡಿಸಿದೆ. ಏಪ್ರಿಲ್ 10 ರಿಂದ 21 ರವರೆಗೆ ಈ ವರ್ಷದ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು 6 ರಿಂದ 18 ವಯೋಮಿತಿಯ
ಮಕ್ಕಳಿಗೆ ಶಿಬಿರದಲ್ಲಿ ಭಾಗವಹಿಸಬಹುದು.ಪ್ರತಿದಿನ ಬೆಳಗ್ಗೆ 9:30 ರಿಂದ ಸಂಜೆ 4.30 ರವರೆಗೆ ಶಿಬಿರ ನಡೆಯಲಿದ್ದು ವೈವಿಧ್ಯಮಯ ಆಟಗಳು, ಕಲಿಕೆಗಳು ಸೇರಿ ಮಕ್ಕಳಿಗೆ ರಸದೌತಣವನ್ನೇ ನೀಡಲಿದೆ. ರಾಷ್ಟ್ರ ಹಾಗೂ ರಾಜ್ಯಮಟ್ಟದ ತಜ್ಞ ತರಬೇತುದಾರರು ಶಿಬಿರದಲ್ಲಿ ಭಾಗವಹಿಸಿ ತರಬೇತಿಯನ್ನು ನೀಡಲಿದ್ದಾರೆ.
ವೈವಿಧ್ಯತೆಯ ಶಿಬಿರ:
ಶಿಬಿರದಲ್ಲಿ ಹತ್ತು ಹಲವಾರು ತರಬೇತಿಗಳನ್ನು ನೀಡಲಾಗವುದು. ವೈಶಿಷ್ಟ್ಯ ಪೂರ್ಣ ತರಬೇತಿಗಳು, ಆಟಗಳು, ಕಲೆಗಳು ಮೇಳೈಸಲಿದೆ.
ಫುಟ್ಬಾಲ್ ತರಬೇತಿ (ನಾಲ್ಕನೇ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ),ನಟನಾ ಕೌಶಲ್ಯ, ಚಿತ್ರಕಲೆ, ನೃತ್ಯ, ಹಾಸ್ಯ, ಜಾದು, ಮಣ್ಣಿನ ಮಾದರಿಗಳ ತಯಾರಿಕೆ, ನಿರರ್ಗಳವಾಗಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವ ಕಲೆ, ಈಜು ತರಬೇತಿ ಸೇರಿದಂತೆ ಹಲವಾರು ‘ಸರ್ಪ್ರೈಸ್’ಗಳು ಮಕ್ಕಳನ್ನು ಕಾದಿದೆ. ಶಿಬಿರದಲ್ಲಿ ಭಾಗವಹಿಸುವ
ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮೊದಲು ನೋಂದಾಯಿಸಿಸವರಿಗೆ ಆದ್ಯತೆ ನೀಡಲಾಗುವುದು. ಏಪ್ರಿಲ್ 3ರ ಒಳಗೆ ನಿಮ್ಮ ದಾಖಲಾತಿಯನ್ನು ಅನುಮೋದಿಸಿಕೊಳ್ಳಿ. ಶುಲ್ಕ ಕೇವಲ ರೂ.ಎರಡುವರೆ ಸಾವಿರ ಇರಲಿದೆ ಎಂದು ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರಾದ ಅರುಣ್ ಕುಮಾರ್ ತಿಳಿಸಿದ್ದಾರೆ.
ಇನ್ನು ತಡವೇಕೆ..ಈ ಬೇಸಿಗೆ ರಜೆಯನ್ನು ಸ್ಮರಣೀಯವಾಗಿಸಲು ಹಾಗು ಸಂತಸದ ದಿನಗಳನ್ನು ಕಳೆಯಲು ಮಕ್ಕಳಿಗೆ ಇದೊಂದು ಸದಾವಕಾಶ ಇಂದೇ ನೋಂದಾಯಿಸಿಕೊಳ್ಳಿ
ದೂರವಾಣಿ: 08257-233818, 9880597697, 9483640707
ಕೆ.ವಿ.ಜಿ. ಐಪಿಎಸ್ನಲ್ಲಿ ದಾಖಲಾತಿ ಆರಂಭ:
ಡಾ.ರೇಣುಕಾ ಪ್ರಸಾದ್ ಕೆ.ವಿ.ಅವರ ಆಡಳಿತಕ್ಕೊಳಪಟ್ಟು ಸುಳ್ಯ ಕುರುಂಜಿಭಾಗ್ನ ಕೆವಿಜಿ ಕ್ಯಾಂಪಸ್ನಲ್ಲಿರುವ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಕೇಂದ್ರಿಯ ಪಠ್ಯ ಕ್ರಮದಲ್ಲಿ (CBSE) ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಸರ್ವಾಂಗಿಣ ಪ್ರಗತಿಗೆ ಆದ್ಯತೆ ನೀಡುತಿದೆ. ಸತತ ಶೇ.100 ಫಲಿತಾಂಶದೊಂದಿಗೆ ಸ್ಕೂಲ್ ಮುನ್ನಡೆದಿದ್ದು ರಾಜ್ಯದ ಮುಂಚೂಣಿ ರೆಸಿಡೆನ್ಸಿಯಲ್ ಸ್ಕೂಲ್ಗಳ ಪಟ್ಟಿಗೆ ಸೇರಿದೆ.
ಎಲ್ಲಾ ಆಧುನಿಕ ಸೌಲಭ್ಯಗಳು ಹಾಗು ಎಲ್ಲಾ ಸವಲತ್ತುಗಳೊಂದಿಗೆ ಕಾರ್ಯಾಚರಿಸುವ ಸ್ಕೂಲ್ನಲ್ಲಿ 2023-24ನೇ ಸಾಲಿಗೆ ದಾಖಲಾತಿ ಆರಂಭಗೊಂಡಿದೆ. ಪ್ಲೇ ಹೋಮ್, ಪ್ರೀ ಕೆ.ಜಿ, ಎಲ್.ಕೆ.ಜಿ, ಯು.ಕೆ.ಜಿ ಮತ್ತು ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ 2023-24ನೇ
ಶ್ಯೆಕ್ಷಣಿಕ ವರ್ಷಕ್ಕೆ ದಾಖಲಾತಿ ಪ್ರಾರಂಭಗೊಂಡಿದೆ.10ನೇ ತರಗತಿಯಲ್ಲಿ ವರ್ಷಂಪ್ರತಿ ಶೇಕಡ 100ರಷ್ಟು ಫಲಿತಾಂಶ. ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇದೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ನುರಿತ ಹಾಗು ಅನುಭವಿ ಶಿಕ್ಷಕ ವೃಂದ, ಮಲ್ಟಿ ಮೀಡಿಯಾ ಕ್ಲಾಸ್ ರೂಮ್ಗಳು, ಜೊತೆಗೆ ಈಜು, ಯೋಗ, ಕರಾಟೆ, ನೃತ್ಯ ತರಬೇತಿಗಳು, ನುರಿತ ಶಿಕ್ಷಕರಿಂದ ಆಬಾಕಸ್ ಕ್ಲಾಸ್ ಸೇರಿ ಪಠ್ಯ ಹಾಗು ಪಠ್ಯೇತರ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಲಾಗುತಿದೆ. ಅಲ್ಲದೆ ವಿದ್ಯಾರ್ಥಿಗಳ ಪ್ರಯಾಣಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲಾಗುತ್ತಿದೆ.
ದಾಖಲಾತಿಗಾಗಿ ಸಂಪರ್ಕಿಸಿ: 08257-235156, 235157, ಮೊಬ್ಯೆಲ್ ಸಂಖ್ಯೆ – 9483640707