ಸುಳ್ಯ:ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಜ.6 ರಂದು ನಡೆಯಲಿರುವ ವಾರ್ಷಿಕ ಕ್ರೀಡೋತ್ಸವದ ಅಂಗವಾಗಿ ‘ಸ್ಪೋರ್ಟ್ಸ್ ಸ್ಪೆಕ್ಟ್ರಾ’ ಎಂಬ ಶೀರ್ಷಿಕೆಯ ಬ್ಯಾನರ್ ಬಿಡುಗಡೆ ಮಾಡಲಾಯಿತು.
ಶಾಲಾ ಆವರಣದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ
ಬ್ಯಾನರ್ ಅನ್ನು ಅನಾವರಣಗೊಳಿಸಿ ಕ್ರೀಡೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಮಾತನಾಡಿದರು. ಕ್ರೀಡೋತ್ಸವದಲ್ಲಿ ವಿವಿಧ ಟ್ರ್ಯಾಕ್ ಸ್ಪರ್ಧೆಗಳು, ಪೋಷಕರಿಗಾಗಿ ವಿಶೇಷ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಪೋಷಕರಿಗೆ ವಾಟ್ಸಪ್ ಮುಖಾಂತರ ಲಿಂಕನ್ನು ಕಳುಹಿಸಲಾಗುವುದು. ಪೋಷಕರು ತಾವು ಭಾಗವಹಿಸುವ ಸ್ಪರ್ಧೆಗೆ ಲಿಂಕ್ ಮುಖಾಂತರ ಹೆಸರನ್ನು ನೋಂದಾವಣೆ ಮಾಡಬೇಕೆಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.












