ಸುಳ್ಯ:ಡಾ.ಕುರುಂಜಿ ವೆಂಕಟ್ರಮಣ ಗೌಡರ 97 ನೇ ಜಯಂತ್ಯೋತ್ಸವದ ಅಂಗವಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಸಮಾಜ ಸೇವಾ ಕಾರ್ಯ ವಿಭಾಗದಲ್ಲಿ ಸಂಘದ ಸಹಾಯಧನದಲ್ಲಿ ಜಟ್ಟಿಪ್ಪಳ್ಳ ನಿವಾಸಿ ಕಮಲ ಅವರಿಗೆ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.ಮನೆ ನಿರ್ಮಾಣ ಪೂರ್ತಿಗೊಳಿಸಲು
ರೂ.ಒಂದು ಲಕ್ಷ ಸಹಾಯ ಧನ ನೀಡಲಾಗಿದ್ದು, ಪೂರ್ಣ ಗೊಂಡ ಮನೆಯನ್ನು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಎನ್. ಜಯಪ್ರಕಾಶ್ ರೈ ನಾಮ ಫಲಕ ಅನಾವರಣ ಮಾಡಿ ಲೋಕಾರ್ಪಣೆಗೊಳಿಸಿದರು.
ಹಿರಿಯರಾದ ಪಾಚು ಅವರು ದೀಪ ಬೆಳಗಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ. ಟಿ. ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್, ಖಜಾಂಚಿ ಚಂದ್ರಾವತಿ ಬಡ್ಡಡ್ಕ, ಮನೆ ನಿರ್ಮಾಣದ ಉಸ್ತುವಾರಿ ವಹಿಸಿದ್ದ ರಾಮಚಂದ್ರ ಪೆಲ್ತಡ್ಕ, ಸುಳ್ಯ ನಗರ ಯೋಜನಾ ಪ್ರಾಧಿಕಾರಸ(ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ,ಉದ್ಯಮಿ ಹೇಮಂತ್ ಕಾಮತ್, ಸಂಘದ ಪದಾಧಿಕಾರಿಗಳಾದ ದಿನೇಶ್ ಅಂಬೆಕಲ್ಲು, ದಿನೇಶ್ ಮಡಪ್ಪಾಡಿ, ವಿನುತಾ ಪಾತಿಕಲ್ಲು, ರಾಜು ಪಂಡಿತ್, ಶರೀಫ್ ಜಟ್ಟಿಪ್ಪಳ್ಳ, ಮೊದಲಾವರು ಉಪಸ್ಥಿತರಿದ್ದರು.







