ಸುಳ್ಯ: ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವು ಕೆವಿಜಿ ಆಟದ ಮೈದಾನದಲ್ಲಿ ಜ.9ರಂದು ಜರುಗಲಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ರಣಜಿ ತಂಡದ ಮುಖ್ಯ ಆಯ್ಕೆದಾರರು, ಗೋವಾ ಕ್ರಿಕೆಟ್ ತಂಡದ ಕೋಚ್ ಆಗಿರುವ ದೊಡ್ಡ ಗಣೇಶ ಅವರು ಆಗಮಿಸಲಿದ್ದಾರೆ.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕ್ರೀಡಾ ನೃತ್ಯ, ಪಥಸಂಚಲನ, ಯೋಗ, ಕರಾಟೆ ಮತ್ತು ವಿವಿಧ ಕ್ರೀಡಾ ಡ್ರಿಲ್ ಗಳ ಮೂಲಕ ಮನೋರಂಜನೆಯನ್ನು ನೀಡಲಿದ್ದಾರೆ. ಜೊತೆಗೆ ಪೋಷಕರಿಗೂ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.









