ಸುಳ್ಯ:ಸುಳ್ಯದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ 2023-24ನೇ ಸಾಲಿನ ಕ್ರೀಡೋತ್ಸವವ ಜ.9 ರಂದು ಕೆವಿಜಿ ಮೈದಾನದಲ್ಲಿ
ನಡೆಯಿತು. ಪ್ರಾರ್ಥನೆಯ ಮೂಲಕ ಕಾರ್ಯಕ್ರಮ ಆರಂಭವಾಯಿತು. ಮೊದಲಿಗೆ ಶಾಲೆಯ ವಿದ್ಯಾರ್ಥಿಗಳಾದ ಇಶಾನ್ ಅಹಮದ್, ಸಾಕ್ಷಿ, ಸನಫ್, ಪುನರ್ವಿ, ಪ್ರತೀಕ,ಪ್ರತಿಕ್ಷ ಮತ್ತು ಅಝೀಲ್ ಕ್ರೀಡಾ ಜ್ಯೋತಿಯನ್ನು ಬೆಳಗಿದರು. ಬಳಿಕ ಅತಿಥಿಗಳಿಗೆ 4 ತಂಡದ ( ಹಳದಿ, ಕೆಂಪು, ಹಸಿರು ಮತ್ತು ನೀಲಿ) ನಾಯಕರುಗಳನ್ನು ಪರಿಚಯಿಸಲಾಯಿತು. ತದ ನಂತರ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಕ್ರೀಡೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ
ಕರ್ನಾಟಕ ರಣಜಿ ತಂಡದ ಮುಖ್ಯಸ್ಥ, ಗೋವಾ ಕ್ರಿಕೆಟ್ ತಂಡದ ಕೋಚ್ ಆಗಿರುವ ದೊಡ್ಡ ಗಣೇಶ್ ಕ್ರೀಡೋತ್ಸವಕ್ಕೆ ಚಾಲನೆಯನ್ನು ನೀಡಿದರು. ವಿದ್ಯಾರ್ಥಿಗಳು ಗುರಿ ಇಟ್ಟು ಸಾಧನೆ ಮಾಡಬೇಕು. ಪೋಷಕರು ವಿದ್ಯಾರ್ಥಿಗಳ ಆಸಕ್ತಿಯನ್ನು ಗುರುತಿಸಿ ಅದರಲ್ಲಿ ಅವರು ಮುನ್ನಡೆಯುವಂತೆ ಮಾಡಬೇಕು’ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಶಾಲಾ ನಿರ್ದೇಶಕಿ ಡಾ. ಜ್ಯೋತಿ ಆರ್ ಪ್ರಸಾದ್ ಮತ್ತು ವಿ ಟಿ ಯು ಬೆಳಗಾವಿ ಇಲ್ಲಿಯ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿರುವ ಡಾ. ಉಜ್ವಲ್ ಯು.ಜೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಕೆ ವಿ ಜಿ ಐ ಪಿಎ ಸ್ ನ ಗವರ್ನರ್ ಕೌನ್ಸಿಲ್ ಸದಸ್ಯರಾದ ಎನ್. ಎ ರಾಮಚಂದ್ರ,ಪಿ.ಎಸ್ ಗಂಗಾಧರ , ಸಂತೋಷ್ ಕುತ್ತಮುಟ್ಟೆ ಮತ್ತು ಶಾಲಾ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪಥಸಂಚಲನ, ಯೋಗ, ಕರಾಟೆ, ವಿವಿಧ ಕ್ರೀಡಾ ನೃತ್ಯ ಮತ್ತು ಕ್ರೀಡಾ ಡ್ರಿಲ್ ಗಳ ಮೂಲಕ ಮನೋರಂಜನೆಯನ್ನು ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಸಿ, ಬಹುಮಾನವನ್ನು ನೀಡಲಾಯಿತು. 2023-24ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಕೊಟ್ಟು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪೋಷಕರಿಗೂ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಆಯೋಜಿಸಾಲಾಗಿತ್ತು. 9ನೇ ತರಗತಿಯ ಅನೀಶ್ ಮತ್ತು ಎಂಟನೇ ತರಗತಿಯ ಸ್ಕಂದ ದಿಯಾ ಕಲ್ಲಾಜೆ ಕಾರ್ಯಕ್ರಮ
ನಿರೂಪಿಸಿದರು. ಶಾಲಾ ನಾಯಕ ಅನ್ಸಿಫ್ ಸ್ವಾಗತಿಸಿ, ಶಾಲಾ ನಾಯಕಿ ಫಲಕ್ ಫಾರೂಕ್ ವಂದಿಸಿದಳು. ಅಂತ್ಯದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಧ್ವಜ ವನ್ನು ಮಾನ್ಯ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು . ಕಾರ್ಯಕ್ರಮವು ದೈಹಿಕ ಶಿಕ್ಷಕರಾದ ಭಾಸ್ಕರ್, ತೀರ್ಥವರ್ಣ, ಸುಪ್ರಿಯ ಮತ್ತು ಆಶಾ ಜ್ಯೋತಿ ಇವರ ನಿರ್ದೇಶನದಂತೆ ನಡೆಯಿತು.
ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ಎಸ್, ಅಮರ ಜ್ಯೋತಿ ಪಿಯು ಕಾಲೇಜಿನ ಉಪ ಪ್ರಾಂಶುಪಾಲ ದೀಪಕ್ ವೈ ಆರ್, ಕೆವಿಜಿ ಐಟಿಐ ಕಾಲೇಜಿನ ಪ್ರಾಂಶುಪಾಲ ಚಿದಾನಂದ ಬಾಳಿಲ, ಉಪ ಪ್ರಾಂಶುಪಾಲ ದಿನೇಶ್ ಮಡ್ತಿಲ, ದೊಡ್ಡಣ್ಣ ಬರೆಮೇಲು, ಡಾ. ಮನೋಜ್, ಪ್ರಸನ್ನ ಕಲ್ಲಾಜೆ, ಮಾಧವ ಬಿ. ಟಿ, ವಸಂತ ಕಿರಿಭಾಗ ಮತ್ತು ಎಲ್ಲಾ ಶಿಕ್ಷಕ ಶಿಕ್ಷಕೇತರ ವೃಂದಾ ದದವರು , ಪೋಷಕರು ಉಪಸ್ಥಿತರಿದ್ದರು.









