ಸುಳ್ಯ: ಕೆವಿಜಿ ಐಪಿಎಸ್ನಲ್ಲಿ ಕಿಂಡರ್ ಗಾರ್ಟನ್ ವಿಭಾಗದ ಮಕ್ಕಳಿಗೆ ‘ರೈನ್ಬೋ ಡೇ’ ಕಾಮನಬಿಲ್ಲಿನ ದಿನಾಚರಣೆಯನ್ನು ಆಚರಿಸಲಾಯಿತು. ಪುಟ್ಟ ಮಕ್ಕಳು ಕಾಮನಬಿಲ್ಲಿನ ಬಗ್ಗೆ ಮಾತನಾಡಿದರು. ಪ್ರಾಂಶುಪಾಲ ಅರುಣ್ ಕುಮಾರ್ ಮಾತನಾಡಿ ಮಕ್ಕಳ ಬದುಕು
ಕಾಮನಬಿಲ್ಲಿನ ಹಾಗೆ ವರ್ಣ ರಂಜಿತವಾಗಿರಲಿ ಎಂದು ಹಾರೈಸಿದರು. ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಹೇಮಾ ವೈಲಾಯ ಆಚರಣೆಗಳ ಪ್ರಾಮುಖ್ಯತೆ ಕುರಿತು ಮಾತನಾಡಿದರು.ಶಿಕ್ಷಕಿ ಸುನಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸ್ನೇಹ ವಂದನಾರ್ಪಣೆ ಮಾಡಿದರು.









