ಸುಳ್ಯ: ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಮಕ್ಕಳಿಗೆ ಕಾಂತಮಂಗಲದ ಮನಮೋಹನ ಪುತ್ತಿಲ ಅವರ ಗದ್ದೆಯಲ್ಲಿ ಕೆಸರುಗದ್ದೆ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ.ರೇಣುಕಾ ಪ್ರಸಾದ್ ಕೆ.ವಿ ಹಾರೈಸಿದರು.ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ಬಿ ವಿಭಾಗದ ನಿರ್ದೇಶಕಿ ಡಾ. ಜ್ಯೋತಿ ಆರ್ ಪ್ರಸಾದ್ ಕೆವಿಜಿ ಡೆಂಟಲ್ ಕಾಲೇಜಿನ ನಿರ್ದೇಶಕ ಮೌರ್ಯ ಆರ್ ಕುರುಂಜಿ, ಕೆವಿಜಿ ಆಡಳಿತ ಮಂಡಳಿ ಕಮಿಟಿ ಬಿಯ
ಆಡಳಿತಾಧಿಕಾರಿ ಭವಾನಿ ಶಂಕರ ಅಡ್ತಲೆ ,ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಮನಮೋಹನ್ ಪುತ್ತಿಲ ಮತ್ತು ತುಳಸಿ ಹಿಂಗಾರವನ್ನು ಅರಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಶಿಕ್ಷಕಿ ಹೇಮಾ ವೈಲಾಯ ಹಾಡನ್ನು ಹೇಳಿದರು.ಸ್ಕಂದ ದಿಯಾ ಕಲ್ಲಾಜೆ ಮಾತನಾಡಿದರು.

ತುಳಸಿ ಮತ್ತು ಮನಮೋಹನ ಪುತ್ತಿಲ ಅವರನ್ಬು ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಸುಗ್ಗಿ ಹಾಡು, ನೃತ್ಯವನ್ನು ಮಾಡಿ ಮನರಂಜಿಸಿದರು.ಭವಾನಿ ಶಂಕರ ಅಡ್ತಲೆ,ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಕೆಸರುಗದ್ದೆ ಆಟದ ಮಹತ್ವವನ್ನು ತಿಳಿಸಿದರು.
ಬಳಿಕ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು.ನಿಧಿ ಮತ್ತು ಪ್ರತಿಕ್ಷ ನಿರೂಪಿಸಿದರು. ಹತ್ತನೇ ತರಗತಿಯ ಮನ್ವಿತ ಸಿ ಎಚ್ ಸ್ವಾಗತಿಸಿ ಸೋನಾ ನಾರ್ಕೋಡು ವಂದಿಸಿದರು. ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು, ಊರಿನ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.









