ಸುಳ್ಯ: ಸಂಪತ್ಭರಿತ ದೇಶ ಕಟ್ಟುವುದರಲ್ಲಿ, ಸದೃಢ ಸಮಾಜದ ನಿರ್ಮಾಣದದಲ್ಲಿ ಇಂಜಿನಿಯರ್ಗಳ ಪಾತ್ರ ಮಹತ್ತರವಾದುದು. ನೀವು ಕಲಿತ ಶಿಕ್ಷಣವನ್ನು ದೇಶದ ಅಭಿವೃದ್ಧಿಗೆ, ಸಮಾಜದ ಉನ್ನತಿಗೆ ಉಪಯೋಗಿಸಿ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ರಿಜಿಸ್ಟ್ರಾರ್(ಇವ್ಯಾಲ್ಯುವೇಷನ್) ಡಾ. ಟಿ.ಎನ್. ಶ್ರೀನಿವಾಸ ಹೇಳಿದ್ದಾರೆ. ಅಮರಶ್ರೀ ಭಾಗ್ನ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ಮೇ.31ರಂದು ನಡೆದ ಸುಳ್ಯ ಕೆ.ವಿ.ಜಿ. ತಾಂತ್ರಿಕ ಮಹಾ ವಿದ್ಯಾಲಯದ 2023-24ನೇ ಸಾಲಿನ ಅಂತಿಮ ವರ್ಷದ
ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ (ಗ್ರಾಜ್ಯುವೇಷನ್ ಡೇ)ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.ಶಿಸ್ತು, ಸಮರ್ಪಣಾ ಭಾವದಿಂದ ತಮ್ಮ ವೃತ್ತಿಯನ್ನು ಪರಿಣಾಮಕಾರಿಯಾಗಿ ಮಾಡಿದರೆ ಯಶಸ್ಸು ಸಾಧ್ಯ. ಸಂಶೋಧನಾ ಮನೋಭಾವದಿಂದ ಹೊಸ ಆವಿಷ್ಕಾರಗಳನ್ನು ಮಾಡುವ ಮೂಲಕ ಯಶಸ್ವಿಯಾಗಿ ಎಂದು ಅವರು ಕರೆ ನೀಡಿದರು.
ಡಾ.ಕುರುಂಜಿ ವೆಂಕಟ್ರಮಣ ಗೌಡರು ತಮ್ಮ ದೂರದೃಷ್ಠಿತ್ವದ ಫಲವಾಗಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಹಲವಾರು ಮಂದಿಯ ಬದುಕಿಗೆ ಬೆಳಕನ್ನು ನೀಡಿದ್ದಾರೆ. ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿ ಸಾವಿರಾರು ಮಂದಿ ಇಂಜಿನಿಯರ್ಗಳನ್ನು ಸಮಾಜಕ್ಕೆ ನೀಡಲು ಕಾರಣರಾಗಿದ್ದಾರೆ. ಡಾ.ರೇಣುಕಾಪ್ರಸಾದ್ ಕೆ.ವಿ. ಈ ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ. ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಎಕ್ಸಿಕ್ಯುಟಿವ್ ಸಮಿತಿ ಸದಸ್ಯರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ವಿಶ್ವ ವಿದ್ಯಾನಿಲಯದೊಂದಿಗೆ ಅತ್ಯುತ್ತಮ ಸಂಬಂಧವನ್ನು ಇರಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಒಎಲ್ಇಯ ಕಮಿಟಿ ‘ಬಿ’ ಚೆಯರ್ಮೆನ್ ಡಾ.ರೇಣುಕಾಪ್ರಸಾದ್ ಕೆ.ವಿ ಮಾತನಾಡಿ’ ಪದವಿ ಪೂರ್ತಿ ಮಾಡುವುದು ಜಿವನದ ಮಹತ್ವದ ಘಟ್ಟ. ವೃತ್ತಿ ಜೀವನದಲ್ಲಿ ಹೆಚ್ಚು ಪರಿಶ್ರಮಪಟ್ಟು ಯಶಸ್ವಿಯಾಗುವುದರ ಜೊತೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿ ಎಂದು ಕರೆ ನೀಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದೆ. ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿತ ಸಾವಿರಾರು ಮಂದಿ ದೇಶ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ. ಇಲ್ಲಿ ಕಲಿತ ವಿದ್ಯಾರ್ಥಿಗಳು ಕಾಲೇಜಿನ ಬ್ರಾಂಡ್ ಅಂಬಾಸಿಡರ್ಗಳು ಎಂದು ಅವರು ಹೇಳಿದರು.
ಬಿ.ಎಂ.ಎಸ್. ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ ಬೆಂಗಳೂರು ಇದರ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥರಾದ
ಡಾ. ತಿಪ್ಪೇಸ್ವಾಮಿ.ಜಿ ಮುಖ್ಯ ಅತಿಥಿಯಾಗಿದ್ದರು. ಎಒಎಲ್ಇಯ ಕಮಿಟಿ ‘ಬಿ’ ಕಾರ್ಯದರ್ಶಿ ಡಾ.ಜ್ಯೋತಿ ಆರ್.ಪ್ರಸಾದ್, ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್ನ ಸಿ.ಇ.ಒ., ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಗ್ ವಿಭಾಗದ ಮುಖ್ಯಸ್ಥರು ಹಾಗೂ ಬೆಳಗಾವಿ ವಿಟಿಯು ಎಕ್ಸಿಕ್ಯುಟಿವ್ ಕಮಿಟಿ ಸದಸ್ಯರಾದ ಡಾ. ಉಜ್ವಲ್ ಯು.ಜೆ., ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ, ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ, ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಸಂತೋಷ್ ಜಾಕೆ, ವಿಟಿಯು ಬೆಳಗಾವಿ ಇದರ ಮಂಗಳೂರು ವಿಭಾಗದ ಸ್ಪೆಷಲ್ ಆಫೀಸರ್ ಡಾ.ಶಿವಕುಮಾರ್,
ಕಾಲೇಜಿನ
ಎಂಬಿಎ ವಿಭಾಗದ ಮುಖ್ಯಸ್ಥರಾದ ಪ್ರೊ.ಕೃಷ್ಣಾನಂದ, ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಶೇಖರ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ.ಉಮಾಶಂಕರ ಕೆ.ಎಸ್, ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ಡಾ.ಕುಸುಮಾಧರ ಎಸ್, ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ.ಬಾಲಪ್ರದೀಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್ನ ಸಿ.ಇ.ಒ. ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಗ್ ವಿಭಾಗದ ಮುಖ್ಯಸ್ಥರು ಹಾಗೂ ಬೆಳಗಾವಿ ವಿಟಿಯು ಎಕ್ಸಿಕ್ಯುಟಿವ್ ಕಮಿಟಿ ಸದಸ್ಯರಾದ ಡಾ. ಉಜ್ವಲ್ ಯು.ಜೆ ಸ್ವಾಗತಿಸಿದರು. ಎಒಎಲ್ಇಯ ಕಮಿಟಿ ‘ಬಿ’ ಕಾರ್ಯದರ್ಶಿ ಡಾ.ಜ್ಯೋತಿ ಆರ್.ಪ್ರಸಾದ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಕಾಲೇಜಿನ
ಪ್ರಾಂಶುಪಾಲರಾದ ಡಾ. ಸುರೇಶ ವಿ ಶುಭ ಹಾರೈಸಿದರು. ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ ವಂದಿಸಿದರು.
ಪ್ರೊ.ಭವ್ಯ ಪಿ.ಎಸ್ ಮತ್ತು ಪ್ರೊ.ಅಶ್ವಿಜಿಯಾ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ನಿತ್ಯಾನಂದ ಮುಂಡೋಡಿ, ಎನ್.ಎ.ರಾಮಚಂದ್ರ, ದಯಾನಂದ ಕುರುಂಜಿ, ಅಮರ ಜ್ಯೋತಿ ಪ್ರಾಂಶುಪಾಲರಾದ ಯಶೋದ ರಾಮಚಂದ್ರ, ಐಟಿಐ ಪ್ರಾಂಶುಪಾಲರಾದ ಚಿದಾನಂದ ಬಾಳಿಲ, ಕೆವಿಜಿ ಐಪಿಎಸ್ ಪ್ರಾಂಶುಪಾಲರಾದ ಅರುಣ್ ಕುಮಾರ್, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.