ಸುಳ್ಯ:ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಾರ್ಷಿಕ ಕ್ರೀಡಾಕೂಟ ‘ಉಡಾನ್ -2025’ ಎನ್ನೆಂಸಿ ಮೈದಾನದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಕ್ರೀಡಾಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಕಾಲೇಜಿನ
ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ವಿನಯ್ ಶಂಕರ್ ಭಾರಧ್ವಾಜ್ ಬಿ., ಕೆ ವಿ ಜಿ ಆಯುರ್ವೇದ ಫಾರ್ಮಸಿ ಮತ್ತು ರಿಸರ್ಚ್ ಸೆಂಟರಿನ ಸಿ ಇ ಒ ಡಾ. ಪುರುಷೋತ್ತಮ ಕೆ ಜಿ, ವಾರ್ಷಿಕ ಕ್ರೀಡಾಕೂಟದ ಸಂಚಾಲಕ ಡಾ.ಹರ್ಷವರ್ಧನ ಕೆ, ವಾರ್ಷಿಕ ಕ್ರೀಡಾ ಸಮಿತಿಯ ಸದಸ್ಯರಾದ ಡಾ.ಅವಿನಾಶ್ ಕೆ. ವಿ., ಡಾ. ಲಕ್ಷ್ಮೀಶ ಕೆ. ಎಸ್., ಕಾಲೇಜು ವಿದ್ಯಾರ್ಥಿ ಸಂಘದ ನಾಯಕಿ ನೀಲಾ ಮಹಾಂತಪ್ಪ,
ಕಲಿಕಾ ವೈದ್ಯರ ಪ್ರತಿನಿಧಿ ಡಾ. ಲಕ್ಷ್ಮೀ ಸುರೇಶ್, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು ಹಾಗೂ ಸ್ನಾತ್ತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾವ್ಯ ಗೌಡ ಮತ್ತು ತಂಡ ಪ್ರಾರ್ಥಿಸಿದರು.
ದಿವ್ಯಾ ರಾಣಿ ಕೋಪರ್ಡೆ ಸ್ವಾಗತಿಸಿ ವಂದಿಸಿದರು.
ವಿದ್ಯಾರ್ಥಿಗಳಾದ ಮೇಘನಾ ಮತ್ತು ಸ್ವಾತಿ ಆರ್.ಎನ್. ಕಾರ್ಯಕ್ರಮ ನಿರೂಪಿಸಿದರು.












