ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೆಯುಡಬ್ಲ್ಯುಜೆ ರಾಜ್ಯಮಟ್ಟದ ‘ಬ್ರ್ಯಾಂಡ್ ಮಂಗಳೂರು ರೋಹನ್ ಕಪ್’ -2024’ಕ್ರಿಕೆಟ್ ಪಂದ್ಯಾಟ ಬೆಂಗಳೂರು ನಗರ ಕಾರ್ಯ ನಿರತ ಪತ್ರಕರ್ತರ ಸಂಘ ಪ್ರಥಮ ಹಾಗೂ ಹಾಸನ ಕಾರ್ಯ ನಿರತ ಪತ್ರಕರ್ತರ ತಂಡ ದ್ವಿತೀಯ ಹಾಗೂ


ಬೆಂಗಳೂರು ಹಾಗೂ ಹಾಸನ ತಂಡಗಳು
ಮಂಡ್ಯ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ತೃತೀಯ ಪ್ರಶಸ್ತಿ ಗಳಿಸಿದೆ.ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದ ಕ್ಯಾ.ಪ್ರಾಂಜಲ್ ಸ್ಮರಣೆ ಯೊಂದಿಗೆ ನಡೆದ ಪಂದ್ಯಾವಳಿ ಯ ಸಮಾರೋಪ ಸಮಾರಂಭದಲ್ಲಿ ವಿಧಾನ ಸಭಾ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಬೈರತಿ ಬಸವರಾಜು, ಬಿ.ರಮಾನಾಥ ರೈ,ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ, ಶಾಸಕ ಹರೀಶ್ ಪೂಂಜಾ,ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ದ.ಕ ಜಿಲ್ಲಾ ಧಿಕಾರಿ ಮುಲ್ಲೈ ಮುಗಿಲನ್ ,ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ ಮಾತನಾಡಿದರು.









