ಸುಳ್ಯ: ಗೋಲ್ಡನ್ ಬುಕ್ ಆಪ್ ವಲ್ಡ್ ರೆಕಾರ್ಡ್ನಲ್ಲಿ ಸ್ಥಾನ ಪಡೆದು ದಾಖಲೆ ನಿರ್ಮಿಸಬೇಕೆಂಬ ಹಂಬಲದಿಂದ ಸುಳ್ಯದ ವಿದ್ಯಾರ್ಥಿ 24 ಗಂಟೆಗಳ ನಿರಂತರ ಕುಚುಪುಡಿ ನೃತ್ಯ ಆರಂಭಿಸಿದ್ದಾರೆ.ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದ ಎರಡನೇ ಬಿಎಸ್ಸಿ ವಿದ್ಯಾರ್ಥಿ

ಮಂಡೆಕೋಲಿನ ಅಭಿಷೇಕ್ ಕಣೆಮರಡ್ಕ ಸಾಧನೆಯ ಹಾದಿಯಲ್ಲಿ ಗೆಜ್ಜೆ ಕಟ್ಟಿದ್ದಾರೆ. ನೆಹರೂ ಸ್ಮಾರಕ ಕಾಲೇಜಿನ ಸಭಾಂಗಣದಲ್ಲಿ ಏ.11ರಂದು ಸಂಜೆ 6.30ರಿಂದ ಕುಚ್ಚುಪುಡಿ ನೃತ್ಯ ಆರಂಭೀಸಿದ್ದು ಏ.12ರ ಸಂಜೆ 6.30ರ ತನಕ ನಿರಂತರ 24 ಗಂಟೆ ಕುಚ್ಚುಪುಡಿ ನೃತ್ಯ ಮಾಡಲಿದ್ದಾರೆ. ಮಂಡೆಕೋಲಿನ ರವಿ ಕಣೆಮರಡ್ಕ ಹಾಗೂ ಸುಜಾತ ದಂಪತಿಗಳ ಪುತ್ರ ಅಭಿಷೇಕ್ ಚಿಕ್ಕ ಪ್ರಾಯದಿಂದಲೇ ನೃತ್ಯ ಅಭ್ಯಸಿಸುತ್ತಾರೆ.















